×
Ad

ದಿಲ್ಲಿಯಲ್ಲಿ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ: ಪೊಲೀಸರ ಮಾಹಿತಿ

Update: 2022-08-22 10:29 IST
Photo:PTI

ಹೊಸದಿಲ್ಲಿ: ಎರಡು ವಾರಗಳಿಂದ ನಾಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿ  ಹೊಸದಿಲ್ಲಿಯ ಯಮುನಾ ಖಾದರ್ ಪ್ರದೇಶದ ಬಳಿ ಶವವಾಗಿ ಪತ್ತೆಯಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಆಗಸ್ಟ್ 5 ರಂದು ತನ್ನ ಸೆಂಟ್ರಲ್ ದಿಲ್ಲಿಯ ಮನೆಯಿಂದ ಹುಡುಗಿ ಕಾಣೆಯಾಗಿದ್ದಳು ಹಾಗೂ  ಅದೇ ದಿನ ಆಕೆಯ ತಂದೆ ದೂರು ನೀಡಿದ್ದಾರೆ ಎಂದು ಅವರು ಹೇಳಿದರು.

ಪೊಲೀಸರ ಪ್ರಕಾರ ಆಗಸ್ಟ್ 18 ರಂದು ಅರಣ್ಯ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.

ಅಪಹರಣ ಹಾಗೂ  ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಾಥಮಿಕ ವರದಿಗಳ ಪ್ರಕಾರ  ಬಾಲಕಿಯ ಬಾಯಿ ಮುಚ್ಚಲಾಗಿದೆ ಹಾಗೂ  ಬಾಲಕಿಯ ಗಂಟಲು ಸೀಳಲಾಗಿದೆ. ಪರಿಚಿತ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿಯನ್ನು ಅಪಹರಿಸಿ ಕಾಡಿನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ನಂತರ ಆಕೆಯ ಶವವನ್ನು ನದಿಯ ದಡದಲ್ಲಿ ಎಸೆಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News