×
Ad

ಭಟ್ಕಳದಿಂದ ಅಪಹರಣಕ್ಕೊಳಗಾಗಿದ್ದ ಬಾಲಕ ಗೋವಾದಲ್ಲಿ ಪತ್ತೆ

Update: 2022-08-22 12:02 IST

ಭಟ್ಕಳ, ಆ.22: ಇಲ್ಲಿನ ಆಝಾದ್ ನಗರದಲ್ಲಿ ಶನಿವಾರ ರಾತ್ರಿ ಅಪಹರಣಕ್ಕೊಳಗಾಗಿದ್ದ ಎಂಟು ವರ್ಷದ ಬಾಲಕ ಅಲಿ ಸಾದಾ ಗೋವಾದಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಶನಿವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಅಂಗಡಿಯಿಂದ ಬ್ರೆಡ್ ತರಲೆಂದು ಮನೆಯಿಂದ ಹೋಗಿದ್ದ ಅಲಿ ಸಾದಾ ಬಳಿಕ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಗಳ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆತನನ್ನು ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಅಪಹರಿಸಿರುವುದು ಪತ್ತೆಯಾಗಿತ್ತು.

ಇದನ್ನೂ ಓದಿ: ದಿಲ್ಲಿಯಲ್ಲಿ ಎರಡು ವಾರಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ: ಪೊಲೀಸರ ಮಾಹಿತಿ

ಈ ಬಗ್ಗೆ ದೂರು ದಾಖಲಾಗಿದ್ದು, ಭಟ್ಕಳ ನಗರ ಠಾಣೆಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಇದೀಗ ಬಾಲಕನನ್ನು  ಗೋವಾದಲ್ಲಿ ಪತ್ತೆ ಹಚ್ಚಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News