×
Ad

'ಸಿಬಿಐ ಅಧಿಕಾರಿಗಳು ಟಿಎಂಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಹೀಗಾಗಿ ಬಂಗಾಳಕ್ಕೆ ಈಡಿ ಕಳುಹಿಸಲಾಗಿದೆ'

Update: 2022-08-22 14:42 IST
Photo:PTI

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನೊಂದಿಗೆ ಕೆಲವು ಸಿಬಿಐ ಅಧಿಕಾರಿಗಳು "ಒಪ್ಪಂದ (ತಿಳುವಳಿಕೆ)" ಮಾಡಿಕೊಂಡಿದ್ದಾರೆ, ಆದ್ದರಿಂದ ರಾಜ್ಯದಲ್ಲಿನ ಭ್ರಷ್ಟಾಚಾರದ ತನಿಖೆಗಾಗಿ ಜಾರಿ ನಿರ್ದೇಶನಾಲಯವನ್ನು(ED)  ಕಳುಹಿಸಲಾಗಿದೆ ಎಂದು ಬಿಜೆಪಿ ನಾಯಕ ದಿಲೀಪ್ ಘೋಷ್ (BJP leader Dilip Ghosh)ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಿಲೀಪ್ ಘೋಷ್, ಕೆಲವು ಸಿಬಿಐ ಅಧಿಕಾರಿಗಳು ಹಾಗೂ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಡುವಿನ ತಿಳುವಳಿಕೆಯಿಂದಾಗಿ ಕಲ್ಲಿದ್ದಲು ಹಗರಣ, ಜಾನುವಾರು ಕಳ್ಳಸಾಗಣೆ ಪ್ರಕರಣ ಹಾಗೂ  ಶಾಲಾ ಉದ್ಯೋಗಗಳ ತನಿಖೆಯಲ್ಲಿ ಪ್ರಗತಿಯಾಗಲಿಲ್ಲ ಎಂದರು

"ಪಶ್ಚಿಮ ಬಂಗಾಳದ ಸಿಬಿಐ ಅಧಿಕಾರಿಗಳ ವಿಭಾಗ ಹಾಗೂ  ಟಿಎಂಸಿ ನಡುವಿನ ಹೊಂದಾಣಿಕೆಯಿಂದಾಗಿ, ಏಜೆನ್ಸಿಯ ತನಿಖೆಗಳು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ತನಿಖೆಗಳು ತಿಂಗಳುಗಟ್ಟಲೆ ಸಾಗಿದವು... ಕೆಲವು ಸಿಬಿಐ ಅಧಿಕಾರಿಗಳು ಮಾರಾಟವಾದರು, ಕೆಲವರು ಲಕ್ಷಗಳಲ್ಲಿ, ಕೆಲವರು ಕೋಟಿಗಳಲ್ಲಿ ಮಾರಾಟವಾದರು" ಎಂದು ಲೋಕಸಭಾ ಸಂಸದರು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ "ವಿಭಜನೆಯ ಭೀಕರತೆ" ಕುರಿತ ವಿಚಾರ ಸಂಕಿರಣದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News