ಹವಾಲಾ, ಕ್ರಿಪ್ಟೋಕರೆನ್ಸಿ ಹೂಡಿಕೆ ಮೂಲಕ ರೂ. 500 ಕೋಟಿಗೂ ಅಧಿಕ ಹಣ ಚೀನಾಗೆ ರವಾನೆ: ತನಿಖೆಯಿಂದ ಬಹಿರಂಗ

Update: 2022-08-22 11:57 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ತ್ವರಿತ ಸಾಲ ಅಥವಾ ಇನ್‍ಸ್ಟೆಂಟ್ ಲೋನ್(instant loan) ನೀಡುವ ಹಲವು ಆ್ಯಪ್‍ಗಳಿಗೆ ಚೀನೀ(china) ನಂಟು ಇರುವುದನ್ನು ದಿಲ್ಲಿ ಪೊಲೀಸರ ವಿಶೇಷ ಘಟಕದ ಇಂಟಲಿಜೆನ್ಸ್ ಫ್ಯೂಷನ್ ಎಂಡ್ ಸ್ಟ್ರೆಟಜಿಕ್ ಆಪರೇಷನ್ಸ್ ವಿಭಾಗವು ಪತ್ತೆ ಹಚ್ಚಿದೆ ಹಾಗೂ ಕಳೆದ ಎರಡು ತಿಂಗಳಿನಲ್ಲಿ ಈ ನಿಟ್ಟಿನಲ್ಲಿ 22 ಮಂದಿಯನ್ನು ಬಂಧಿಸಿದೆ.  ಈ ಇನ್‍ಸ್ಟೆಂಟ್ ಲೋನ್ ಜಾಲವು ಸುಮಾರು ರೂ 500 ಕೋಟಿ ಹಣವನ್ನು ಹವಾಲಾ ಮಾರ್ಗದಲ್ಲಿ ಅಥವಾ ಕ್ರಿಪ್ಟೋಕರೆನ್ಸಿಯಲ್ಲಿ(crypto currency) ಹೂಡಿಕೆ ಮೂಲಕ ಚೀನಾಗೆ ಸಾಗಿಸಿದೆ ಎಂದೂ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗಳು ಚೀನೀ ನಾಗರಿಕರ ಪರವಾಗಿ ಕಾರ್ಯಾಚರಿಸುತ್ತಿದ್ದರು ಎಂದೂ ತಿಳಿದು ಬಂದಿದೆ. ಇನ್‍ಸ್ಟೆಂಟ್ ಲೋನ್ ನೀಡುವ ಆ್ಯಪ್‍ಗಳು(instant loan applications) ಅಧಿಕ ಬಡ್ಡಿ ವಿಧಿಸುತ್ತಿವೆ ಹಾಗೂ ಸಾಲ ಮರುಪಾವತಿಯ ನಂತರವೂ ತಿರುಚಲ್ಪಟ್ಟ ನಗ್ನ ಚಿತ್ರಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಿವೆ ಎಂಬ ಕುರಿತು ನೂರಾರು ದೂರುಗಳು ಬಂದಿವೆ ಎಂದು ಡಿಸಿಪಿ ಕೆಪಿಎಸ್ ಮಲ್ಹೋತ್ರ ತಿಳಿಸಿದ್ದಾರೆ.

ಇವುಗಳನ್ನಾಧರಿಸಿ ತನಿಖೆ ನಡೆಸಿದಾಗ ಇಂತಹ 100 ಕ್ಕೂ ಅಧಿಕ ಲೋನ್ ಆ್ಯಪ್‍ಗಳು ಸಾಲ ನೀಡಿ ನಂತರ ಜನರ ಸುಲಿಗೆ ಮಾಡುವ ಕೆಲಸ ಮಾಡುತ್ತಿವೆ. ಅಪ್ಲಿಕೇಶನ್ ಡೌನ್‍ಲೋಡ್ ಸಂದರ್ಭ ದುರುದ್ದೇಶಿತ ಅನುಮತಿಗಳನ್ನು ಪಡೆಯುವ ಆ್ಯಪ್ ನಂತರ ಸಂಬಂಧಿತರ ಚಾಟ್ ಸಂದೇಶಗಳು, ಸಂಪರ್ಕಗಳು, ಚಿತ್ರಗಳನ್ನು ಚೀನಾ ಮತ್ತು ಹಾಂಕಾಂಗ್‍ನಲ್ಲಿರುವ ಸರ್ವರ್‍ಗಳಿಗೆ ಅಪ್‍ಲೋಡ್ ಮಾಡಲಾಗುತ್ತದೆ ಮತ್ತು ಲೋನ್ ಆ್ಯಪ್ ಹೆಸರಿನಲ್ಲಿ ವಂಚನೆ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಆ್ಯಪ್‍ಗಳು ಹೆಚ್ಚಾಗಿ ಸಣ್ಣ ಮೊತ್ತದ ಸಾಲದ ಅಗತ್ಯವಿರುವವರನ್ನು ಟಾರ್ಗೆಟ್ ಮಾಡುತ್ತವೆ ಹಾಗೂ ಇವುಗಳ ನಿಜವಾದ ಮಾಲೀಕರು ಚೀನೀ ನಾಗರಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಗುರುತಿಸಿರುವ ಕೆಲವೊಂದು ವಂಚನೆ ನಡೆಸುವ ಆ್ಯಪ್‍ಗಳಲ್ಲಿ ಈ ಕೆಳಗಿನ ಆ್ಯಪ್‍ಗಳೂ ಸೇರಿವೆ-Raise cash, PP money , Rupees master, Cash ray, Mobipocket, Papa money, Infinity cash, Kredit mango, Kredit marvel, CB loan app, Cash advance app, HDB loan, Cash tree, Raw loan, Under Process, Minute cash, Cash light, Cash fish, HD credit, Ruppes land, Cash room , Rupee loan and Well Kredit

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News