ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸಂಚು: ರಶ್ಯದಲ್ಲಿ ಐಸಿಸ್ ಉಗ್ರ ಸೆರೆ ; ವರದಿ

Update: 2022-08-22 17:52 GMT

ಮಾಸ್ಕೋ, ಆ.೨೨: ಭಾರತದ ಪ್ರಮುಖ ನಾಯಕರ ವಿರುದ್ಧ ಆತ್ಮಾಹುತಿ ದಾಳಿಗೆ ಸಂಚುಹೂಡಿದ್ದ ಐಸಿಸ್ ಸಂಘಟನೆಯ ಉಗ್ರನನ್ನು ಬಂಧಿಸಿರುವುದಾಗಿ ರಶ್ಯದ ಫೆಡರಲ್ ಸೆಕ್ಯುರಿಟಿ ಸರ್ವಿಸ್(ಎಫ್ಎಸ್ಬಿ) ಸೋಮವಾರ ಹೇಳಿದೆ.

ಭಾರತದ ಆಡಳಿತ ವಲಯದಲ್ಲಿನ ಪ್ರಮುಖ ನಾಯಕರೊಬ್ಬರನ್ನು ಗುರಿಯಾಗಿಸಿ ಆತ್ಮಹತ್ಯಾ ದಾಳಿಗೆ ಸಂಚುಹೂಡಿದ್ದ ಐಸಿಸ್ ಸದಸ್ಯನನ್ನು ಎಫ್ಎಸ್ಬಿ ಪತ್ತೆಹಚ್ಚಿ ಬಂಧಿಸಿದೆ. ಈತ ಮಧ್ಯ ಏಶ್ಯಾ ವಲಯದ ದೇಶವೊಂದರ ನಿವಾಸಿ' ಎಂದು ರಶ್ಯ ಸುದ್ಧಿಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. ಬಂಧಿತನನ್ನು ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ಐಸಿಸ್ ಸಂಘಟನೆ ನೇಮಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  
ಐಸಿಸ್ ಮತ್ತದರ ಸಹಸಂಘಟನೆಗಳನ್ನು 1967ರ ಕಾನೂನುಬಾಹಿರ ಕೃತ್ಯ(ತಡೆಗಟ್ಟುವಿಕೆ) ಕಾಯ್ದೆಯಡಿ ಭಯೋತ್ಪಾದಕ ಸಂಘಟನೆ ಎಂದು ಕೇಂದ್ರ ಸರಕಾರ ಗುರುತಿಸಿದೆ.  ಐಸಿಸ್ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡಲು ವಿವಿಧ ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್ ವಲಯದ ಮೇಲೆ ಸಂಬಂಧಿಸಿದ ಏಜೆನ್ಸಿಗಳು ಸೂಕ್ಷ್ಮ ನಿಗಾ ಇರಿಸಿದ್ದು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News