ಉತ್ತರ ಒಡಿಶಾದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣ: ಸುಮಾರು 10 ಲಕ್ಷ ಜನರು ಕಂಗಾಲು

Update: 2022-08-23 04:28 GMT
ಸಾಂದರ್ಭಿಕ ಚಿತ್ರ, Photo:PTI

ಭುವನೇಶ್ವರ: ಬಾಲಸೋರ್ ಸೇರಿದಂತೆ ಉತ್ತರ ಒಡಿಶಾದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೋಮವಾರ ಭೀಕರವಾಗಿದ್ದು,(Flood Situation Worsens In North Odisha) ಉಕ್ಕಿ ಹರಿಯುತ್ತಿರುವ ನದಿಗಳು ತಗ್ಗು ಪ್ರದೇಶಗಳನ್ನು ಮುಳುಗಿಸಿದ್ದು, ಕನಿಷ್ಠ 134 ಹಳ್ಳಿಗಳ ಜನರು ಕಂಗಾಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಆಳವಾದ ವಾಯುಭಾರ ಕುಸಿತದಿಂದ ಉಂಟಾದ ಭಾರೀ ಮಳೆಯಿಂದಾಗಿ ಉತ್ತರ ಒಡಿಶಾದ ಸುವರ್ಣರೇಖಾ, ಬುಧಬಲಾಂಗ್, ಜಲಕಾ ಮತ್ತು ಬೈತರಾಣಿ ಮುಂತಾದ ನದಿಗಳು ಉಕ್ಕಿ ಹರಿಯುತ್ತಿವೆ. ನಂತರ ಜಾರ್ಖಂಡ್‌ನಿಂದ ಪ್ರವಾಹದ ನೀರು ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.

ಬಾಲಸೋರ್, ಮಯೂರ್‌ಭಂಜ್, ಜಾಜ್‌ಪುರ್ ಮತ್ತು ಭದ್ರಕ್ ಜಿಲ್ಲೆಗಳಲ್ಲಿ 251 ಹಳ್ಳಿಗಳು ಉತ್ತರ ಒಡಿಶಾ ಪ್ರವಾಹದಿಂದ ಬಾಧಿತವಾಗಿವೆ, ಒಟ್ಟು ಪ್ರವಾಹ ಪೀಡಿತ ಜನಸಂಖ್ಯೆ  9.66 ಲಕ್ಷ ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಪ್ರಸ್ತುತ 440 ಪರಿಹಾರ ಕೇಂದ್ರಗಳನ್ನು ನಿರ್ವಹಿಸುತ್ತಿದೆ, ಅಲ್ಲಿ 1.71 ಕ್ಕೂ ಹೆಚ್ಚು ಜನರಿಗೆ ಊಟವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News