×
Ad

ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನ

Update: 2022-08-23 11:11 IST
Photo:Instagram

ಚಂಡಿಗಢ: ಹರ್ಯಾಣದ  ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ (BJP leader Sonali Phogat )ಗೋವಾದಲ್ಲಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ  43 ವರ್ಷ ವಯಸ್ಸಾಗಿತ್ತು.

ವರದಿಗಳ ಪ್ರಕಾರ, ಫೋಗಟ್  ತನ್ನ ಕೆಲವು ಉದ್ಯೋಗಿಗಳೊಂದಿಗೆ ಕಡಲತೀರದ ರಾಜ್ಯ ಗೋವಾಕ್ಕೆ ಪ್ರವಾಸ ಕೈಗೊಂಡಿದ್ದರು.

ನಟಿ-ರಾಜಕಾರಣಿ ಸೋನಾಲಿ ತನ್ನ ಸಾವಿಗೆ ಸ್ವಲ್ಪ ಮೊದಲು Instagram ನಲ್ಲಿ ಹಲವು ಚಿತ್ರಗಳು ಹಾಗೂ ವೀಡಿಯೊಗಳನ್ನು  ಪೋಸ್ಟ್ ಮಾಡಿದ್ದರು.

ಸೋನಾಲಿಗೆ ಯಶೋಧರ ಫೋಗಟ್ ಎಂಬ ಮಗಳಿದ್ದಾಳೆ. ಸೋನಾಲಿ ಅವರ ಪತಿ ಸಂಜಯ್ ಫೋಗಟ್ 2016 ರಲ್ಲಿ ನಿಧನರಾಗಿದ್ದರು.

ಸೋನಾಲಿ ಫೋಗಟ್ 2019 ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆದಂಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.  ಆಗಿನ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ಅವರನ್ನು ಎದುರಿಸಿದ್ದರು.

ಕಳೆದ ತಿಂಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಷ್ಣೋಯ್   ಇತ್ತೀಚೆಗೆ ಬಿಜೆಪಿಗೆ ಸೇರಿದ್ದರು.  

ಉಪ ಚುನಾವಣೆಯಲ್ಲಿ ಆದಂಪುರದಿಂದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಷ್ಣೋಯ್ ಕಳೆದ ವಾರ ಸೋನಾಲಿ ಫೋಗಟ್ ಅವರನ್ನು ಭೇಟಿ ಮಾಡಿದ್ದರು.

ಸೋನಾಲಿ ಫೋಗಟ್ ತನ್ನ ಟಿಕ್‌ಟಾಕ್ ವೀಡಿಯೊಗಳೊಂದಿಗೆ ಖ್ಯಾತಿಗೆ ಪಡೆದಿದ್ದರು ಹಾಗೂ  ಟಿಕ್‌ಟಾಕ್ ನಲ್ಲಿ ಅಪಾರ ಅನುಯಾಯಿಗಳನ್ನು ಹೊಂದಿದ್ದರು. ಬಿಜೆಪಿಗೆ ಸೇರುವ ಮೊದಲು ಅವರು 2006 ರಲ್ಲಿ ಟಿವಿ ನಿರೂಪಕಿಯಾಗಿ ಪಾದಾರ್ಪಣೆ ಮಾಡಿದರು.

ರಿಯಾಲಿಟಿ ಶೋ ಬಿಗ್ ಬಾಸ್ 2020 ರ ಆವೃತ್ತಿಯಲ್ಲೂ ಅವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News