ರಾಮದೇವ್ ಅಲೋಪತಿ ವೈದ್ಯರ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ: ಸುಪ್ರೀಂ ಕೋರ್ಟ್ ಪ್ರಶ್ನೆ
ಹೊಸದಿಲ್ಲಿ: ಯೋಗ ಗುರು ರಾಮ್‌ದೇವ್ (Baba Ramdev)ಅವರು ಅಲೋಪತಿಯಂತಹ (Allopathy )ಆಧುನಿಕ ವೈದ್ಯ ಪದ್ಧತಿಗಳ ವಿರುದ್ಧ ನೀಡಿರುವ ಹೇಳಿಕೆಗಳಿಗೆ ಸುಪ್ರೀಂ ಕೋರ್ಟ್ (Supreme Court )ಮಂಗಳವಾರ ಟೀಕೆ ಮಾಡಿದೆ.
"ಬಾಬಾ ರಾಮದೇವ್ ಅಲೋಪತಿ ವೈದ್ಯರ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ? ರಾಮ್ ದೇವ್ ಯೋಗವನ್ನು ಜನಪ್ರಿಯಗೊಳಿಸಿದರು. ಒಳ್ಳೆಯದು. ಆದರೆ ಅವರು ಇತರ ವ್ಯವಸ್ಥೆಗಳನ್ನು ಟೀಕಿಸಬಾರದು. ಅವರು ಅನುಸರಿಸುತ್ತಿರುವ ವೈದ್ಯಕೀಯ ಪದ್ಧತಿಗಳು ಎಲ್ಲವನ್ನೂ ಗುಣಪಡಿಸುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ?" ಎಂದು ಮುಖ್ಯ ನ್ಯಾಯಮೂರ್ತಿ ಎನ್ .ವಿ. ರಮಣ ಪ್ರಶ್ನಿಸಿದ್ದಾರೆ.
ಬಾಬಾ ರಾಮ್‌ದೇವ್ ಅವರ ಕಂಪನಿಗಳು ಅಲೋಪತಿ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ರಮಣ ನೇತೃತ್ವದ ಪೀಠವು ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಇಂತಹ ತಪ್ಪುದಾರಿಗೆಳೆಯುವ ಜಾಹೀರಾತುಗಳು ಹಾಗೂ ಹೇಳಿಕೆಗಳನ್ನು ತಡೆಯುವಂತೆ ಕೇಳಿದೆ.
"ಲಕ್ಷಗಟ್ಟಲೆ ಜನರು ಅಲೋಪತಿ ಔಷಧಿಗಳಿಂದ ಸಾವನ್ನಪ್ಪಿದ್ದಾರೆ, ಕೊರೋನವೈರಸ್ ಲಸಿಕೆಯ ಎರಡೂ ಡೋಸ್ ಪಡೆದ ನಂತರವೂ ಭಾರತದಲ್ಲಿ 10,000 ಕ್ಕೂ ಹೆಚ್ಚು ವೈದ್ಯರು ಸಾವನ್ನಪ್ಪಿದ್ದಾರೆ ಎಂದು ರಾಮದೇವ್ ಹೇಳಿದ್ದ ವೀಡಿಯೊ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.