×
Ad

​ಕಾಸರಗೋಡು : ಕಳವು ಪ್ರಕರಣಗಳ ಆರೋಪಿ ಸೆರೆ

Update: 2022-08-23 13:27 IST

ಕಾಸರಗೋಡು: ಕಳವು ಪ್ರಕರಣಗಳ ಆರೋಪಿಯೋರ್ವನನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬದಿಯಡ್ಕ ಪಂಜಿಕಲ್ ಉಕ್ಕಾಸ್ ಬಶೀರ್ (55) ಎಂದು ಗುರುತಿಸಲಾಗಿದೆ.

ಬದಿಯಡ್ಕದಲ್ಲಿ ಪೊಲೀಸರಿಂದ ತಪ್ಪಿಸಿ ಪರಾರಿಯಾಗಲೆತ್ನಿಸಿದಾಗ ಬೆನ್ನಟ್ಟಿ ಈತನನ್ನು ಬಂಧಿಸಲಾಯಿತು. ಆಗಸ್ಟ್ 20ರಂದು  ಬೇಕಲ ಕೋಟೆ ಗುಡ್ಡೆಯಲ್ಲಿ ಅಬ್ದುಲ್ ರಹ್ಮಾನ್ ಎಂಬವರ ಮನೆಗೆ ನುಗ್ಗಿ ಕಳವು ನಡೆಸಿದ ಪ್ರಕರಣದ ಆರೋಪಿಯಾಗಿದ್ದಾನೆ.

ಈತನಿಗಾಗಿ ಬೇಕಲ ಪೊಲೀಸರು ತನಿಖೆ  ನಡೆಸುತ್ತಿದ್ದು, ಈ ನಡುವೆ ಬದಿಯಡ್ಕದಲ್ಲಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News