ಆ.27ರಿಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
Update: 2022-08-23 21:00 IST
ಮಂಗಳೂರು : ದ.ಕ.ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲೆ ಹಾಗೂ ತಾಲೂಕು, ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಪುರಸಭೆಗಳ ಸಹಯೋಗದೊಂದಿಗೆ 2022-23 ನೇ ಸಾಲಿನ ಮಂಗಳೂರು ಹಾಗೂ ಉಳ್ಳಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆ.27ರಿಂದ ಆಯೋಜಿಸಲಾಗಿದೆ.
ಆ.27ರ ಬೆಳಗ್ಗೆ 9ಕ್ಕೆ ಮಂಗಳೂರು ನಗರದ ದಸರಾ ಕ್ರೀಡಾಕೂಟವು ಮಂಗಳಾ ಕ್ರೀಡಾಂಗಣದಲ್ಲಿ ಹಾಗೂ ಆ.28ರ ಬೆಳಗ್ಗೆ 9ಕ್ಕೆ ಉಳ್ಳಾಲ ತಾಲೂಕಿನ ದಸರಾ ಕ್ರೀಡಾಕೂಟವು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಆ.28ರ ನಡೆಯಲಿದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.