ಒಪ್ಪಿಗೆ ಪಡೆಯದೆ ಅದಾನಿಯಿಂದ ಶೇರುಗಳ ಖರೀದಿ: ಎನ್‌ಡಿಟಿವಿ ಅಸಮಾಧಾನ

Update: 2022-08-23 16:41 GMT

ಹೊಸದಿಲ್ಲಿ: ಎನ್‌ಡಿಟಿವಿ(NDTV)ಯ ಶೇ.29ರಷ್ಟು ಶೇರುಗಳನ್ನು ಪರೋಕ್ಷವಾಗಿ ಖರೀದಿಸಿರುವುದಾಗಿ ಅದಾನಿ ಸಮೂಹವು ಘೋಷಿಸಿದ ಕೆಲವೇ ತಾಸುಗಳ ಬಳಿಕ ಎನ್‌ಡಿಟಿವಿ ಹೇಳಿಕೆಯೊಂದನ್ನು ನೀಡಿ, ‘‘ಎನ್‌ಡಿಟಿವಿ ಸಂಸ್ಥಾಪಕ ಒಪ್ಪಿಗೆಯನ್ನು ಪಡೆಯದೆ, ಅವರಿಗೆ ಯಾವುದೇ ಮಾಹಿತಿಯನ್ನು ನೀಡದೆ ಮತ್ತು ಸಮಾಲೋಚನೆಯನ್ನು ನಡೆಸದೆ ಈ ನಡೆಯನ್ನಿರಿಸಲಾಗಿದೆ ’’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಆದರೆ ಎನ್‌ಡಿಟಿವಿಯ ಈ ಹೇಳಿಕೆ ಬಗ್ಗೆ ಅದಾನಿ ಸಮೂಹವು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಭಾರತದ ಅತ್ಯಂತ ಜನಪ್ರಿಯ ಸುದ್ದಿಸಂಸ್ಥೆಗಳಲ್ಲೊಂದಾದ ಎನ್‌ಡಿಟಿವಿಯು ಕೇಂದ್ರ ಸರಕಾರದ ನೀತಿಗಳ ಬಗ್ಗೆ ಟೀಕಾತ್ಮಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಕೆಲವೇ ಕೆಲವು ಮಾಧ್ಯಮ ಸಂಸ್ಥೆಗಳಲ್ಲೊಂದೆಂದು ಪರಿಗಣಿಸಲ್ಪಟ್ಟಿದೆ.

ಇದನ್ನೂ ಓದಿ: NDTVಯ ಶೇ. 29ರಷ್ಟು ಶೇರು ಖರೀದಿಸಿದ ಅದಾನಿ ಸಮೂಹ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News