ಜಾರ್ಖಂಡ್: ಈಡಿ ದಾಳಿಯ ವೇಳೆ ಎರಡು AK-47 ರೈಫಲ್‌ಗಳು ವಶಕ್ಕೆ
Update: 2022-08-24 13:58 IST
ರಾಂಚಿ: ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಅದಕ್ಕೆ ಸಂಬಂಧಿತ ಆರೋಪಗಳ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು(ಈಡಿ) ರಾಂಚಿಯ ಮನೆಯೊಂದರಿಂದ ಪ್ರೇಮ್ ಪ್ರಕಾಶ್‌ಗೆ ಸಂಬಂಧಿಸಿದ ಎರಡು ಎಕೆ -47 ರೈಫಲ್‌ಗಳನ್ನು ವಶಪಡಿಸಿಕೊಂಡಿದೆ(Two AK-47 Rifles Seized). ಪ್ರಕಾಶ್ ಅವರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತರು ಎಂದು ಹೇಳಲಾಗಿದ್ದರೂ, ಅವರಿಬ್ಬರೂ ಇದುವರೆಗೆ ಪ್ರತಿಕ್ರಿಯಿಸಿಲ್ಲ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ನ್ಯೂಸ್ ಏಜೆನ್ಸಿ ಎಎನ್‌ಐ ಪ್ರಕಾರ ಈ ಪ್ರಕರಣವು ಸುಲಿಗೆ ಆರೋಪಗಳನ್ನೂ ಒಳಗೊಂಡಿತ್ತು.