×
Ad

ಜರ್ಮನಿ : ವಿಶ್ವದ ಪ್ರಥಮ ಜಲಜನಕ‌ ಚಾಲಿತ ರೈಲು ಸೇವೆ ಅನಾವರಣ

Update: 2022-08-24 22:56 IST
photo :pti 

ಬರ್ಲಿನ್, ಆ.೨೪: ಜರ್ಮನಿಯು ಬುಧವಾರ ಸಂಪೂರ್ಣವಾಗಿ ಜಲಜನಕ ಚಾಲಿತ ರೈಲುಮಾರ್ಗವನ್ನು ಅನಾವರಣಗೊಳಿಸಿದ್ದು ಇದು ಸರಬರಾಜು ಸವಾಲುಗಳ ಹೊರತಾಗಿಯೂ ಹಸಿರು ರೈಲು ಸಾರಿಗೆಯತ್ತ ಪ್ರಮುಖ ಹೆಜ್ಜೆಯಾಗಿದೆ.

‌ಜರ್ಮನಿಯ ಲೋವರ್ ಸ್ಯಾಕ್ಸೊನಿ ರಾಜ್ಯಕ್ಕೆ ಫ್ರಾನ್ಸ್ನ ಪ್ರಮುಖ ಸಂಸ್ಥೆ ಅಲ್ಸ್ಟೋಮ್ ಪೂರೈಸಿರುವ 14ರೈಲುಗಳ ಪ್ರಥಮ ಬ್ಯಾಚ್  ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿ ಕಕ್ಸಾವೆನ್, ಬ್ರೆಮರ್ಹವೆನ್, ಬ್ರೆಮರ್ವೊಯೆರ್ಡ್ ಮತ್ತು ಬಕ್ಸ್ಟೆಹುಡ್ ನಗರಗಳ ನಡುವಿನ 100 ಕಿ.ಮೀ ವ್ಯಾಪ್ತಿಯ ಹಳಿಗಳಲ್ಲಿ ಸಂಚರಿಸಲಿದೆ.

ಶೂನ್ಯ ಇಂಗಾಲ ಹೊರಸೂಸುವಿಕೆ ವಿಧದ ಸಾರಿಗೆ ವಿಧಾನವಾಗಿರುವ ಹೈಡ್ರೋಜನ್ ರೈಲುಗಳು ರೈಲ್ವೇ ವಲಯವನ್ನು ಇಂಗಾಲಮುಕ್ತಗೊಳಿಸುವ ಭರವಸೆದಾಯಕ ಉಪಕ್ರಮವಾಗಿದೆ. 93 ಮಿಲಿಯನ್ ಡಾಲರ್ ವೆಚ್ಚದ ಈ ಜಲಜನಕ ರೈಲಿನ ಬ್ಯಾಚ್, ಪ್ರತೀ ವರ್ಷ ವಾತಾವರಣಕ್ಕೆ ಬಿಡುಗಡೆಯಾಗುವ 4400 ಇಂಗಾಲದ ಡೈಯಾಕ್ಸೆöÊಡ್ ಅನ್ನು ತಡೆಯುತ್ತದೆ ಎಂದು ಪ್ರಾದೇಶಿಕ ರೈಲ್ವೇ ವಿಭಾಗ ಹೇಳಿದೆ. 

2025ರ ವೇಳೆಗೆ ಪ್ರಾದೇಶಿಕ ಯುರೋಪ್ನ ಮಾರುಕಟ್ಟೆಯಲ್ಲಿ 20%ದಷ್ಟು ಜಲಜನಕ ರೈಲು ಸಂಚರಿಸಲಿದೆ. ಜರ್ಮನಿಯಲ್ಲೇ ಸುಮಾರು 3000 ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿ ಜಲಜನಕ ರೈಲುಗಳು ಸಂಚರಿಸಲಿವೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News