ಮಗುವನ್ನು ಹೆಗಲಲ್ಲಿ ಹೊತ್ತು ಸೈಕಲ್‌ ರಿಕ್ಷಾ ತುಳಿಯುವ ಚಾಲಕ: ವೀಡಿಯೋ ವೈರಲ್‌

Update: 2022-08-25 15:33 GMT

ಜಬಲ್‌ಪುರ: ಇಲ್ಲಿನ ರಿಕ್ಷಾ ಚಾಲಕರೊಬ್ಬರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಒಂದು ಕೈಯಲ್ಲಿ ಹಾಲು ಬಾಯಿಯ ಕಂದ, ಇನ್ನೊಂದು ಕೈಯಲ್ಲಿ ಸೈಕಲ್‌ ರಿಕ್ಷಾದ‌ ಹಿಡಿಕೆ (ಹ್ಯಾಂಡಲ್) ಹಿಡಿದು ಜನನಿಬಿಡ ಪಟ್ಟಣದಲ್ಲಿ ಪ್ರಯಾಣಿಕರನ್ನು ಹುಡುಕಿ ಹೊರಟ ಪಯಣ. ಇದು ರಾಜೇಶ್‌ ಅವರ ದಿನನಿತ್ಯದ ಬದುಕು.

ರಾಜೇಶ್‌ ಅವರ ಹೆಂಡತಿ ಅವರೊಂದಿಗೆ ವಾಸಿಸುತ್ತಿಲ್ಲದ ಕಾರಣ ಹಾಗೂ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದ ಕಾರಣ, ಬಿಸಿಲಿರಲಿ ಮಳೆಯಿರಲಿ ಹಾಲುಗಲ್ಲದ ಕಂದಮ್ಮನನ್ನು ಹೆಗಲಿನಲ್ಲಿ ಹೊತ್ತುಕೊಂಡೇ ರಿಕ್ಷಾ ತುಳಿಯುವ ಅನಿವಾರ್ಯತೆ ರಾಜೇಶ್‌ ಅವರಿಗೆ ಇದೆ.

ರಾಜೇಶ್‌ಗೆ ಇಬ್ಬರು ಮಕ್ಕಳಿದ್ದಾರೆ.  ದೊಡ್ಡ ಮಗುವನ್ನು ಬಿಟ್ಟು ಚಿಕ್ಕವನನ್ನು ತನ್ನೊಂದಿಗೆ ಹೊತ್ತುಕೊಂಡು ತನ್ನ ಕರ್ತವ್ಯವನ್ನು ರಾಜೇಶ್‌ ನಿರ್ವಹಿಸುತ್ತಾರೆ.

ತಮ್ಮ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ, ಪ್ರತಿ ದಿನ ಮಗುವನ್ನು ಒಂದೇ ಕೈಯಲ್ಲಿ ಹಿಡಿದುಕೊಂಡು ರಿಕ್ಷಾ ಓಡಿಸುತ್ತೇನೆ ಎನ್ನುತ್ತಾರೆ ರಾಜೇಶ್. ಮಕ್ಕಳಿಬ್ಬರನ್ನೂ ನೋಡಿಕೊಳ್ಳಲು ರಿಕ್ಷಾ ಓಡಿಸುತ್ತಾನೆ, ತನ್ನ ಮಗು ಇನ್ನೂ ಚಿಕ್ಕದಾಗಿದೆ ಆದ್ದರಿಂದ ಅದು ಮನೆಯಲ್ಲಿ ಯಾರೊಬ್ಬರ ಆಶ್ರಯ ಇಲ್ಲದೆ ವಾಸಿಸುವುದಿಲ್ಲ, ಹಾಗಾಗಿ ತನ್ನೊಂದಿಗೆ ಕರೆದುಕೊಂಡು ಹೋಗುವುದಾಗಿ ಅವರು ಹೇಳಿದ್ದಾರೆ. .

ಮಗುವನ್ನು ಹೊತ್ತು ಸೈಕಲ್‌ ತುಳಿಯುವ ರಾಜೇಶ್‌ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ, ಹಲವಾರು ನೆಟ್ಟಿಗರು ರಾಜೇಶ್‌ ವಿಡಿಯೋ ಹಂಚಿ ಅನುಕಂಪವನ್ನು ವ್ಯಕ್ತಪಡಿಸಿದ್ದಾರೆ.

ಜಬಲ್‌ಪುರದಿಂದ, ಬಡವರ ಎಲ್ಲಾ ಕಲ್ಯಾಣಗಳನ್ನು ನಿರಾಕರಿಸುವ ಚಿತ್ರಣ. ಐದು ವರ್ಷದ ಮಗಳನ್ನಿ ಬಸ್‌ ಸ್ಟಾಪಿನಲ್ಲೇ ಬಿಟ್ಟು ಕೈಯಲ್ಲಿ ಮಗುವನ್ನು ಹೊತ್ತು ಸೈಕಲ್‌ ತುಳಿಯುತ್ತಾರೆ. ಇದರಿಂದ ಅವರು ರೊಟ್ಟಿ ಸಂಪಾದಿಸಬಹುದು ಎಂದು ರಾಜೇಶ್‌ ಅವರನ್ನು ಪರಿಚಯಿಸುವ ಅಡಿಬರೆಹದೊಂದಿಗೆ ಅನುರಾಗ್‌ ಡ್ವಾರಿ ಎಂಬವರು ರಾಜೇಶ್‌ ಅವರ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ ಹಲವಾರು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಆತನಿಗೆ ನಿಜವಾಗಿಯೂ ಸಹಾಯ ಬೇಕು, ಇದು ಅಪಾಯಕಾರಿ ಹಾಗೂ ಬೇಸರದ ಸಂಗತಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News