×
Ad

ಭಟ್ಕಳ: ಗಣೇಶೋತ್ಸವ ಹಿನ್ನೆಲೆ; ಪೂರ್ವಭಾವಿ ಸಭೆ

Update: 2022-08-25 20:19 IST

ಭಟ್ಕಳ: ಗಣೇಶ ಹಬ್ಬದ ನಿಮಿತ್ತ ತಾಲೂಕಿನಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪ್ರಮುಖರೊಂದಿಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಪೂರ್ವಭಾವಿ ಸಭೆ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಸಭೆಯಲ್ಲಿ ಗಣೇಶೋತ್ಸವ ಆಚರಣೆಗೆ ಸರಕಾರ ಹೊರಡಿಸಿದ ಮಾರ್ಗಸೂಚಿಯನ್ನು ನಗರಠಾಣೆ ಇನ್ಸಪೆಕ್ಟರ್ ದಿವಾಕರ್ ಪಿ.ಎಮ್. ವಿವರಿಸಿದರು.

ಗಣೇಶ ಹಬ್ಬದಲ್ಲಿ ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ಪರವಾನಿಗೆಯನ್ನು ಎಲ್ಲಾ ಇಲಾಖೆಗಳ ಸಮನ್ವಯದಿಂದ ನೀಡುವಂತೆ ಮತ್ತು ಏಕ ಗವಾಕ್ಷಿ ಯೋಜನೆಯಡಿಯಲ್ಲಿ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ ಎಂದರು.

ಸಾರ್ವಜನಿಕ ಗಣೇಶೋತ್ಸವ ಆಚರಣೆಯ ವೇಳೆಯಲ್ಲಿ ಪರಿಸರ ಮಾಲಿನ್ಯ ಆಗದಂತೆ ಕಾಪಾಡುವುದು, ಸಿ.ಸಿ.ಕ್ಯಾಮೆರಾ ಅಳವಡಿಕೆ, ವಿದ್ಯುತ್ ಲೈನ್ ಕೆಳಗಡೆಯಲ್ಲಿ ಮೂರ್ತಿ ಪ್ರತಿಷ್ಟಾಪನೆಯಾದಂತೆ ನೋಡಿಕೊಳ್ಳುವುದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ತಿಳಿಸಲಾಯಿತು. 

ಸಮಿತಿಯ ಪ್ರಮುಖರಾದ ಶಂಕರ ಶೆಟ್ಟಿ, ಶ್ರೀಧರ ನಾಯ್ಕಆಸರಕೇರಿ, ಕೃಷ್ಣಾ ನಾಯ್ಕಆಸರಕೇರಿ ಮುಂತಾದವರು ಸಲಹೆಗಳನ್ನು ನೀಡಿದರು. 

ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಮಾತನಾಡಿ ಗಣಪತಿ ವಿಸರ್ಜನೆಯ ವೇಳೆ ಸಮಯ ಪಾಲನೆ ಮಾಡುವಂತೆ ಕೋರಿದರು. 

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಮಾತನಾಡಿ ಎರಡು ವರ್ಷ ಕೋವಿಡ್ ಹಿನ್ನೆಲೆ ಸರಕಾರದ ಕಟ್ಟು ನಿಟ್ಟಿನ ಮಾರ್ಗಸೂಚಿಯಂತೆ ಹಬ್ಬವನ್ನು ಸಮಿತಿ ಅವರು ಆಚರಿಸಿದ್ದರು. ಆದರೆ ಈ ಬಾರಿ ವಿಜೃಂಭಣೆಯ ಆಚರಣೆಗೆ ಸರಕಾರದಿಂದ ಅಡೆತಡೆಯಿಲ್ಲವಾಗಿದೆ. ಮುಖ್ಯವಾಗಿ ಶಾಂತಿಯುತ, ಸುವ್ಯವಸ್ಥಿತವಾಗಿ ಹಬ್ಬವನ್ನು ಸಮಿತಿ ಅವರು ಆಚರಿಸಿ ಸಹಕರಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ ಡಾ. ಸುಮಂತ ಬಿ.ಇ.,ಗ್ರಾಮೀಣಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಜಾಲಿ ಪ.ಪಂ.ಮುಖ್ಯಾಧಿಕಾರಿರಾಮಚಂದ್ರ ವರ್ಣೇಕರ್, ತಾ.ಪಂ.ಕಾ.ನಿ. ಅಧಿಕಾರಿ ಪ್ರಭಾಕರಚಿಕ್ಕನಮನೆ ಹಾಗೂ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News