×
Ad

ಜಿಎನ್‌ ಸಾಯಿಬಾಬಾರೊಂದಿಗೆ ಯುಎಪಿಎ ಅಡಿ ಬಂಧನವಾಗಿದ್ದ ಪಾಂಡು ನರೋಟೆ ಹಂದಿ ಜ್ವರಕ್ಕೆ ಬಲಿ

Update: 2022-08-25 21:46 IST
Photo: Twitter/suchitrav

ನಾಗ್‌ಪುರ: ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ಅವರೊಂದಿಗೆ ಯುಎಪಿಎ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿ ಪಾಂಡು ನರೋಟೆ ಅವರು ಎಚ್1ಎನ್1 ಜ್ವರದಿಂದ ತೀವ್ರ ಸೋಂಕಿನಿಂದ ನಾಗ್ಪುರದಲ್ಲಿ ಸಾವನ್ನಪ್ಪಿದ್ದಾರೆ. 2017 ರಲ್ಲಿ ಜಿಎನ್ ಸಾಯಿಬಾಬಾ ಅವರು ನಕ್ಸಲೀಯರೊಂದಿಗೆ ನಂಟು ಹೊಂದಿದ್ದಾರೆಂದು ಆರೋಪಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಜೈಲು ಅಧಿಕಾರಿಗಳು ನರೋಟೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಜಿ.ಎನ್.ಸಾಯಿಬಾಬಾ ಅವರ ಪತ್ನಿ ವಸಂತಕುಮಾರಿ ಆರೋಪಿಸಿದ್ದರು. 33 ವರ್ಷದ ನರೋಟೆ ಅವರು ತೀವ್ರ ಅಸ್ವಸ್ಥರಾಗಿದ್ದರು‌ ಸಹ ಅವರ ಆರೈಕೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ನರೋಟೆ ಅವರ ವಕೀಲರು ಮನವಿ ಮಾಡಿದರೂ ಅವರನ್ನು ಐಸಿಯು ವಾರ್ಡ್‌ಗೆ ಕಳುಹಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪಾಂಡು ಬಂಧನದ ವೇಳೆ ಆರೋಗ್ಯವಂತ ವ್ಯಕ್ತಿಯಾಗಿದ್ದರು ಎಂದು ವಸಂತ ಕುಮಾರಿ ತಿಳಿಸಿದ್ದಾರೆ. 33 ವರ್ಷದ ಆರೋಗ್ಯವಂತ ವ್ಯಕ್ತಿಗೆ ಇಷ್ಟು ಬೇಗ ಕಾಯಿಲೆ ಬರುವುದು ಹೇಗೆ ಎಂದು ಪ್ರಶ್ನಿಸಿದ ಅವರು, ನರೋಟೆ ಆರೋಗ್ಯವಂತ ವ್ಯಕ್ತಿಯಾಗಿದ್ದರು. ಅವರು ಅನಾರೋಗ್ಯಕ್ಕೆ ಒಳಗಾದಾಗ, ಜೈಲು ಅಧಿಕಾರಿಗಳು ಅವರನ್ನು ನೋಡಿಕೊಳ್ಳಲಿಲ್ಲ, ಇದರಿಂದಾಗಿ ಅವರು ಚಿಕಿತ್ಸೆ ಪಡೆಯಲು ತಡವಾಗಿ ಸಾವನ್ನಪ್ಪಿದರು ಎಂದು ಹೇಳಿದ್ದಾರೆ.

33 ವರ್ಷದ ನರೋಟೆ, ಅವರು ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದರು. ಅವರಿಗೆ ಆಗಸ್ಟ್ 20 ರಂದು ತೀವ್ರ ಜ್ವರವಿತ್ತು, ನಂತರ ಹಂದಿ ಜ್ವರದಿಂದ ಬಳಲುತ್ತಿದ್ದರು ಎಂದು ಉಪ ಅಧೀಕ್ಷಕಿ ದೀಪಾ ಆಗೇ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅವರನ್ನು ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಎಸ್ಪಿ ತಿಳಿಸಿದ್ದಾರೆ.

ಆದರೆ, ಜೈಲು ಅಧಿಕಾರಿಗಳು ಸಕಾಲದಲ್ಲಿ ವೈದ್ಯಕೀಯ ಸೇವೆ ನೀಡಿಲ್ಲ ಎಂದು ನರೋಟೆ ಪರ ವಕೀಲರು ಆರೋಪಿಸಿದ್ದಾರೆ. ನರೋಟೆ ಅವರ ಸ್ಥಿತಿ ಹದಗೆಟ್ಟ ನಂತರವೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು. ಅವರ ವಕೀಲರಲ್ಲಿ ಒಬ್ಬರಾದ ಆಕಾಶ್ ಸೋರ್ಟೆ  ಆಗಸ್ಟ್ 23 ರಂದು ಆಸ್ಪತ್ರೆಯಲ್ಲಿ ನರೋಟೆ ಅವರನ್ನು ಭೇಟಿ ಮಾಡಿದ್ದರು. ಅವರು ಆಸ್ಪತ್ರೆಗೆ ಕರೆತಂದಾಗ ನರೋಟೆ ಚಿಂತಾಜನಕ ಸ್ಥಿತಿಯಲ್ಲಿದ್ದರು ಎಂದು ಅವರು ಹೇಳಿದ್ದಾರೆ.

ನರೋಟೆ, ಸಾಯಿಬಾಬಾ ಮತ್ತು ಇತರ ನಾಲ್ವರನ್ನು ಪಿತೂರಿ, ಭಯೋತ್ಪಾದಕ ಗ್ಯಾಂಗ್ ಅಥವಾ ಸಂಘಟನೆಯ ಸದಸ್ಯ ಮತ್ತು ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ  ಆರೋಪದ ಮೇಳೆ ಯುಎಪಿಎಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾರ್ಚ್ 2017 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ನರೋಟೆ ಅವರ ಸಾವು ಸಾಯಿಬಾಬಾ ಅವರ ಆರೋಗ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ, ಅವರು 90% ಅಂಗವಿಕಲರಾಗಿದ್ದಾರೆ ಎಂದು ಹೇಳಿರುವ ಸಾಯಿಬಾಬಾ ಅವರ ಪತ್ನಿ ವಸಂತ ಕುಮಾರಿ ಅವರು ಈ ಹಿಂದೆ ಹಲವು ಬಾರಿ ಬಾಂಬೆ ಸಾಯಿಬಾಬಾರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್‌ನ ನಾಗ್ಪುರ ಪೀಠವನ್ನು     ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News