‌ವ್ಯಕ್ತಿಯೋರ್ವನಿಗೆ ಏಕಕಾಲದಲ್ಲಿ ಕೋವಿಡ್, ಮಂಕಿಪಾಕ್ಸ್ ಎಚ್ಐವಿ ಸೋಂಕು ದೃಢ !

Update: 2022-08-25 17:23 GMT
photo ;NDTV

ರೋಮ್, ಆ.25: ಇಟಲಿಯ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್, ಕೋವಿಡ್ ಸೋಂಕು ಹಾಗೂ ಎಚ್ಐವಿ ಸೋಂಕು ಏಕಕಾಲದಲ್ಲಿ ಕಾಣಿಸಿಕೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.  ಮೂರೂ ಸೋಂಕುಗಳು ವ್ಯಕ್ತಿಯಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡಿರುವ ಪ್ರಪ್ರಥಮ ಪ್ರಕರಣ ಇದಾಗಿದೆ.

ಸ್ಪೇನ್ ಗೆ 5 ದಿನದ ಪ್ರವಾಸದಲ್ಲಿ ತೆರಳಿದ್ದ ಈ ವ್ಯಕ್ತಿ ಸ್ವದೇಶಕ್ಕೆ ವಾಪಸಾದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಮಂಕಿಪಾಕ್ಸ್, ಕೋವಿಡ್ ಮತ್ತು ಎಚ್ಐವಿ- ಈ ಮೂರೂ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಈತ ಕೋವಿಡ್ ಸೋಂಕಿನ ವಿರುದ್ಧದ 2 ಡೋಸ್ ಲಸಿಕೆ ಪಡೆದಿದ್ದಾನೆ. ಚಿಕಿತ್ಸೆಯ ಬಳಿಕ ಮಂಕಿಪಾಕ್ಸ್ ಹಾಗೂ ಕೋವಿಡ್ ಸೋಂಕು ಗುಣವಾಗಿದ್ದು ಎಚ್ಐವಿ ಸೋಂಕಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News