×
Ad

ಮಧ್ಯಪ್ರದೇಶ; ಸೋದರ ಸಂಬಂಧಿ ಬಾಲಕಿ, ಅಜ್ಜಿಯ ಮೇಲೆ ಅತ್ಯಾಚಾರ!

Update: 2022-08-26 07:38 IST

ಜಬಲ್ಪುರ: ಹದಿನಾರು ವರ್ಷ ವಯಸ್ಸಿನ ಸೋದರ ಸಂಬಂಧಿ ಬಾಲಕಿ ಹಾಗೂ ಆಕೆಯ 65 ವರ್ಷ ವಯಸ್ಸಿನ ಅಜ್ಜಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಮಧ್ಯಪ್ರದೇಶದ ಜಬಲ್ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ.

ಆರೋಪಿಗಳು 21-22 ವಯಸ್ಸಿನವರಾಗಿದ್ದು, ರಂಜಿ ಎಂಬಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಆಂತರಿಕ ಗಾಯಗಳಿಂದ ಬಾಲಕಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾಳೆ ಎಂದು ಹೆಚ್ಚುವರಿ ಎಸ್ಪಿ ದಿಲೀಪ್ ಶಿಂಧೆ ಹೇಳಿದ್ದಾರೆ.

"ಅಪ್ರಾಪ್ತ ವಯಸ್ಸಿನ ಬಾಲಕಿ ರಕ್ಷಾಬಂಧನಕ್ಕಾಗಿ ಮುಂಬೈನಿಂದ ಆಗಮಿಸಿದ್ದಳು. ಆಕೆಯ ತಂದೆ ತಮ್ಮ ಅಳಿಯನ ಚಟುವಟಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ರಂಜಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ಹೆಚ್ಚುವರಿ ಎಸ್ಪಿ ವಿವರಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದುದನ್ನು ನೋಡಿ ತಡೆಯಲು ಯತ್ನಿಸಿದ 65 ವರ್ಷದ ವೃದ್ಧೆಯ ಮೇಲೂ ಅತ್ಯಾಚಾರ ಎಸಗಲಾಗಿದೆ. ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಕಾಯಲಾಗುತ್ತಿದ್ದು, ಆರೋಪಿ ಯುವಕರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News