×
Ad

ಟೆಕ್ಸಾಸ್: ಭಾರತೀಯ ಮೂಲದ ಮಹಿಳೆಯರ ಮೇಲೆ ಅಮೆರಿಕದ ಮಹಿಳೆಯಿಂದ ಹಲ್ಲೆ, ಜನಾಂಗೀಯ ನಿಂದನೆ

Update: 2022-08-26 11:15 IST

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಭಾರತೀಯ ಮೂಲದ ನಾಲ್ವರು ಮಹಿಳೆಯರಿಗೆ  ಮೆಕ್ಸಿಕನ್-ಅಮೆರಿಕನ್ ಮಹಿಳೆಯೊಬ್ಬರು ಥಳಿಸಿ, ಜನಾಂಗೀಯ ನಿಂದನೆ ಮಾಡಿದ್ದಲ್ಲದೆ,(Four Indian-American women have been racially abused and smacked by a Mexican-American woman in the US) ನೀವೆಲ್ಲರೂ  ಅಮೆರಿಕವನ್ನು "ಹಾಳು" ಮಾಡುತ್ತಿದ್ದು, "ಭಾರತಕ್ಕೆ ಹಿಂತಿರುಗಿ" ಎಂದು ನಿಂದಿಸಿರುವ ಘಟನೆ ವರದಿಯಾಗಿದೆ.

ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇದೀಗ ಬಂಧನಕ್ಕೊಳಗಾಗಿರುವ ಮಹಿಳೆ ತನ್ನನ್ನು ಮೆಕ್ಸಿಕನ್-ಅಮೆರಿಕನ್ ಎಂದು ಗುರುತಿಸಿಕೊಳ್ಳುವುದು ಮತ್ತು ಭಾರತೀಯ-ಅಮೆರಿಕನ್ನರ ಗುಂಪಿನ ಮೇಲೆ ಹಲ್ಲೆ ನಡೆಸುವುದು ವೀಡಿಯೊದಲ್ಲಿ ಕಂಡುಬಂದಿದೆ.

"ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಭಾರತೀಯರು ಉತ್ತಮ ಜೀವನ ನಡೆಸುವುದಕ್ಕಾಗಿ  ಅಮೆರಿಕಕ್ಕೆ ಬರುತ್ತಿದ್ದೀರಿ" ಎಂದು ಎಸ್ಮೆರಾಲ್ಡಾ ಆಪ್ಟನ್  ಎಂಬ ಮಹಿಳೆ ವೀಡಿಯೊದಲ್ಲಿ ಹೇಳಿದ್ದಾಳೆ. ನಾಲ್ವರು ಭಾರತೀಯ-ಅಮೆರಿಕನ್ ಮಹಿಳೆಯರ ಮೇಲೆ ನಿಂದಿಸಿದ ಆಕೆ"ನೀವು ಭಾರತೀಯರು ಎಲ್ಲೆಡೆ ಇದ್ದೀರಿ" ಎಂದು ಹೇಳಿದ್ದಾಳೆ.

" ನೀವು ಭಾರತಕ್ಕೆ ಹಿಂತಿರುಗಿ. ಜನರು ಈ ದೇಶವನ್ನು ಹಾಳು ಮಾಡುತ್ತಿದ್ದಾರೆ" ಎಂದು ಭಾರತದ ಮಹಿಳೆಯರ ಗುಂಪಿಗೆ ಆಕೆ ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಅಮೆರಿಕದಾದ್ಯಂತ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ಆಘಾತ ಉಂಟು ಮಾಡಿದೆ.

ಆಪ್ಟನ್ ಜನಾಂಗೀಯ ನಿಂದನೆ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಹಾಗೂ ಒಂದು ಹಂತದಲ್ಲಿ ಕನಿಷ್ಠ ಇಬ್ಬರು ಭಾರತೀಯ ಮಹಿಳೆಯರನ್ನು ದೈಹಿಕವಾಗಿ ಹಲ್ಲೆ ನಡೆಸುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News