ಕರ್ನಾಟಕ ಸೇರಿದಂತೆ ದೇಶದ 21 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ

Update: 2022-08-26 14:53 GMT

ಹೊಸದಿಲ್ಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗವು (University Grants Commission -UGC) ಶುಕ್ರವಾರ 21 "ಸ್ವಯಂ ಶೈಲಿಯ ವಿಶ್ವವಿದ್ಯಾನಿಲಯಗಳನ್ನು" ನಕಲಿ ಎಂದು ಘೋಷಿಸಿದೆ. ಈ ಸಂಸ್ಥೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಯು ಗುರುತಿಸಿಲ್ಲ ಮತ್ತು ಯಾವುದೇ ಪದವಿಗಳನ್ನು ನೀಡುವ ಅಧಿಕಾರವನ್ನು ಹೊಂದಿಲ್ಲ ಎಂದು ಉನ್ನತ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 21 ಸ್ವಯಂ ಶೈಲಿಯ, ಮಾನ್ಯತೆ ಪಡೆಯದ ಸಂಸ್ಥೆಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಘೋಷಿಸಲಾಗಿದೆ ಮತ್ತು ಇವುಗಳಿಗೆ ಯಾವುದೇ ಪದವಿ ನೀಡಲು ಅಧಿಕಾರವಿಲ್ಲ ಎಂದು ಸಂಸ್ಥೆಯ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಿಲ್ಲಿಯಯ ಅಂತಹ ಎಂಟು ನಕಲಿ ವಿಶ್ವವಿದ್ಯಾಲಯಗಳನ್ನು ಹೊಂದಿದೆ, ಉಳಿದೆಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ ದಿಲ್ಲಿಯಲ್ಲೇ ಇಂತಹ ನಕಲಿ ಸಂಸ್ಥೆಗಳು ಹೆಚ್ಚಿದೆ ಎಂದು scroll.in ತನ್ನ ವರದಿಯಲ್ಲಿ ಹೇಳಿದೆ.

ದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸಸ್, ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಶನಲ್ ಯೂನಿವರ್ಸಿಟಿ, ಎಡಿಆರ್-ಕೇಂದ್ರಿತ ಜುರಿಡಿಕಲ್ ಯೂನಿವರ್ಸಿಟಿ, ಇಂಡಿಯನ್ ಇನ್‌ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್- ಉದ್ಯೋಗ ಮತ್ತು ಆಧ್ಯಾತ್ಮಿಕ ವಿಶ್ವವಿದ್ಯಾಲಯ (ಆಧ್ಯಾತ್ಮಿಕ ವಿಶ್ವವಿದ್ಯಾಲಯ)ಗಳನ್ನು ನಕಲಿ ಎಂದು ಪಟ್ಟಿ ಮಾಡಲಾಗಿದೆ.

ಉತ್ತರ ಪ್ರದೇಶವು ಅಂತಹ ನಾಲ್ಕು ನಕಲಿ ವಿಶ್ವವಿದ್ಯಾಲಯಗಳನ್ನು ಹೊಂದಿದ್ದು, ಅವರುಗಳನ್ನು ಗಾಂಧಿ ಹಿಂದಿ ವಿದ್ಯಾಪೀಠ, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ವಿಶ್ವವಿದ್ಯಾಲಯ (ಮುಕ್ತ ವಿಶ್ವವಿದ್ಯಾಲಯ) ಮತ್ತು ಭಾರತೀಯ ಶಿಕ್ಷಾ ಪರಿಷತ್ ಎಂದು ಗುರುತಿಸಲಾಗಿದೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಎರಡು ಮತ್ತು ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ತಲಾ ಒಂದು ವಿಶ್ವವಿದ್ಯಾಲಯಗಳು ಸಹ ಪಟ್ಟಿಯಲ್ಲಿವೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ 'ಬಡಗಾನ್ವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ' ಹೆಸರೂ ಸಹ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News