ಎನ್ಡಿಟಿವಿ ಶೇರುಗಳ ಖರೀದಿಗೆ ಸೆಬಿ ಅನುಮೋದನೆಯ ಅಗತ್ಯವೇನಿಲ್ಲ: ಅದಾನಿ ಗ್ರೂಪ್‌

Update: 2022-08-26 15:35 GMT

ಹೊಸದಿಲ್ಲಿ,ಆ.26: ಎನ್ಡಿಟಿವಿ ಸಂಸ್ಥಾಪಕರು ವಿಧಿಸಿರುವ ನಿಯಂತ್ರಣಾತ್ಮಕ ನಿರ್ಬಂಧಗಳು, ಆ ಮಾಧ್ಯಮ ಸಂಸ್ಥೆಯ 29.18 ಶೇಕಡ ಶೇರುಗಳನ್ನು ಖರೀದಿಸುವ ತನ್ನ ಪ್ರಯತ್ನದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ಆದಾನಿ ಗ್ರೂಪ್ ಶುಕ್ರವಾರ ತಿಳಿಸಿದೆ.

ಗೌತಮ್ ಆದಾನಿ ನೇತೃತ್ವದ ಈ ಉದ್ಯಮ ಸಮೂಹವು ಮಂಗಳವಾರ ನೀಡಿದ ಹೇಳಿಕೆಯೊಂದರಲ್ಲಿ ತಾನು ಆ ದಿನವೇ ಖರೀದಿಸಿದ ವಿಶ್ವಪ್ರಧಾನ್ ಕಮರ್ಶಿಯಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹೊಂದದ್ದ ಎನ್ಡಿಟಿವಿಯ ಶೇರುಗಳನ್ನು ತಾನು ಸ್ವಾಧೀನಪಡಿಸಿಕೊಂಡಿರುವುದಾಗಿ ತಿಳಿಸಿತ್ತು. ಆದಾಗ್ಯೂ ಮಾರನೆಯ ದಿನವೇ ಎನ್ಡಿಟಿವಿ ಸುದ್ದಿಸಂಸ್ಥೆ ಸ್ಪಷ್ಟೀಕರಣವೊಂದನ್ನು ನೀಡಿ, ಸಂಸ್ಥೆಯ ಶೇರುಗಳನ್ನು ಪಡೆದುಕೊಳ್ಳಬೇಕಾದರೆ ಆದಾನಿ ಕಂಪೆನಿಯು ಮೊದಲಿಗೆ ಸೆಕ್ಯೂರಿಟೀಸ್ ಹಾಗೂ ಎಕ್ಸ್ಚೇಂಜ್ ಮಂಡಳಿ (ಸೆಬಿ)ಯಿಂದ ಅನುಮೋದನೆಯನ್ನು ಪಡೆಯಬೇಕು. ಯಾಕೆಂದರೆ ಸೆಬಿಯು ಆದಾನಿ ಕಂಪೆನಿಗೆ ಕಾಲ ಶೇರುಗಳ ಖರೀದಿ ಹಾಗೂ ಮಾರಾಟವನ್ನು ಎರಡು ವರ್ಷಗಳ ಕಾಲ ನಿಷೇಧಿಸಿದೆ ಎಂದು ತಿಳಿಸಿತ್ತು.

ಆದರೆ ಶುಕ್ರವಾರ ಆದಾನಿ ಗ್ರೂಪ್ ಈ ಬಗ್ಗೆ ನೀಡಿದ ಹೇಳಿಕೆಯೊಂದರಲ್ಲಿ, 2020ರ ಸೆಬಿ ಆದೇಶವು ಎನ್ಡಿಟಿವಿಯ ಸಂಸ್ಥಾಪಕ ಸಂಸ್ಥೆಯಾದ ರಾಧಿಕಾ ರಾಯ್ ಪ್ರಣಯ್ ರಾಯ್ ಪ್ರೈವೇಟ್ ಲಿಮಿಟೆಡ್, ಗೆ ಅನ್ವಯವಾಗುವುದಿಲ್ಲ. ಹೀಗಾಗಿ ಎನ್ಡಿಟಿವಿ ಸಂಸ್ಥೆಯು ವ್ಯಕ್ತಪಡಿಸಿದ ಆತಂಕಗಳು ಆಧಾರರಹಿತ, ಕಾನೂನಾತ್ಮಕವಾಗಿ ಅಸಮರ್ಥನೀಯ ಹಾಗೂ ಯಾವುದೇ ಅರ್ಹತೆಯನ್ನು ಹೊಂದಿಲ್ಲವೆಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News