ಪಾಕಿಸ್ತಾನದಲ್ಲಿ 1 ಶತಕೋಟಿ ಡಾಲರ್ ಹೂಡಿಕೆ: ಸೌದಿ ಅರೇಬಿಯಾ

Update: 2022-08-26 16:11 GMT

ರಿಯಾದ್, ಆ.26: ತೀವ್ರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ 1 ಬಿಲಿಯನ್(ಶತಕೋಟಿ) ಡಾಲರ್ ಮೊತ್ತವನ್ನು ಹೂಡಿಕೆ ಮಾಡುವುದಾಗಿ ಸೌದಿ ಅರೆಬಿಯಾ ಘೋಷಿಸಿದೆ. ಪಾಕಿಸ್ತಾನದ ಅರ್ಥವ್ಯವಸ್ಥೆ ಮತ್ತು ಅಲ್ಲಿನ ಜನತೆಗೆ ಸೌದಿ ಅರೆಬಿಯಾದ ಬೆಂಬಲ ಮತ್ತು ನೆರವನ್ನು ದೃಢೀಕರಿಸುವ ಕ್ರಮವಾಗಿ ಆ ದೇಶದಲ್ಲಿ 1 ಶತಕೋಟಿ ಡಾಲರ್ ಮೊತ್ತವನ್ನು ಹೂಡಿಕೆ ಮಾಡುವಂತೆ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್‌ ಸೌದ್ ಅವರು ನಿರ್ದೇಶನ ನೀಡಿದ್ದಾರೆ ಎಂದು ಸೌದಿ ಪ್ರೆಸ್ ಏಜೆನ್ಸಿ(ಎಸ್ಪಿಎ) ಗುರುವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News