ಸೆ.೬ರಂದು ಅಮೆರಿಕಕ್ಕೆ ತೈವಾನ್ ನ ಉನ್ನತ ಅಧಿಕಾರಿ ಭೇಟಿ

Update: 2022-08-26 17:10 GMT

ತೈಪೆ, ಆ.೨೬: ತೈವಾನ್ , ಅಂತಾರಾಷ್ಟ್ರೀಯ ಬೆಂಬಲವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಅಲ್ಲಿನ  ಮೈನ್ಲ್ಯಾಂಡ್ ವ್ಯವಹಾರ ಸಮಿತಿಯ ಚೀನಾ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಚಿಯು ತಾಯ್ಸುನ್ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ತೈವಾನ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಸೆಪ್ಟಂಬರ್ ೬ರಂದು ಬ್ರೂಕಿಂಗ್ಸ್ ಸಂಸ್ಥೆಯ ಚಿಂತಕರ ವೇದಿಕೆಯ ಕಾರ್ಯಕ್ರಮದಲ್ಲಿ ಮತ್ತು ಅದರ ಮರುದಿನ  ಸೆಂಟರ್ ಫಾರ್ ಎ ನ್ಯೂ ಅಮೆರಿಕನ್ ಸೆಕ್ಯುರಿಟಿ ಸಂಸ್ಥೆಯ ಕಾರ್ಯಕ್ರಮದಲ್ಲಿ ತಾಯ್ಸುನ್ ಉಪನ್ಯಾಸ ನೀಡಲಿದ್ದಾರೆ. ಇಂತಹ ಕಾರ್ಯಕ್ರಮಗಳು ನಮ್ಮ ಕಾರ್ಯನೀತಿಯ ಬಗ್ಗೆ ವಿಶ್ವಕ್ಕೆ ಮನವರಿಕೆ ಮಾಡಲಿವೆ ಮತ್ತು ನಮಗೆ , ಅಂತಾರಾಷ್ಟ್ರೀಯ ಬೆಂಬಲವನ್ನು ದೊರಕಿಸಲಿದೆ ಎಂದು ಸಮಿತಿ ಹೇಳಿದೆ.

ತೈವಾನ್ ವಿರುದ್ಧದ ಚೀನಾದ ಕ್ರಮಗಳು ಉದ್ವಿಗ್ನತೆಯನ್ನು ಹೆಚ್ಚಿಸಿದೆ ಮತ್ತು ಅಂತರಾಷ್ಟಿçÃಯ ಸಮುದಾಯಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಈ ವಲಯದಲ್ಲಿ ತೈವಾನ್ ಜವಾಬ್ದಾರಿಯುತ ಭಾಗವಾಗಿದೆ. ನಾವು ಶಾಂತರಾಗಿದ್ದೇವೆ ಮತ್ತು ಪ್ರಚೋದಕರಾಗಿಲ್ಲ. ಆದರೆ ನಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ.  ನಾವು , ರಾಷ್ಟ್ರೀಯ ಸಾರ್ವಭೌಮತೆ ಮತ್ತು ಭದ್ರತೆಯನ್ನು ದೃಢವಾಗಿ ರಕ್ಷಿಸಿಕೊಳ್ಳಲಿದ್ದೇವೆ, ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲಿದ್ದೇವೆ ಮತ್ತು ತೈವಾನ್ ಜಲಸಂಧಿಯಲ್ಲಿ ಶಾಂತಿಯುತ ಯಥಾಸ್ಥಿತಿಯನ್ನು  ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News