×
Ad

ಏಷ್ಯಾ ಕಪ್‌ ಟಿ-20: ಭಾರತಕ್ಕೆ 148 ರನ್‌ ಗಳ ಗುರಿ ನೀಡಿದ ಪಾಕಿಸ್ತಾನ

Update: 2022-08-28 21:29 IST
Photo: Twitter/BCCI

ದುಬೈ: ಭಾರತ ಮತ್ತು ಪಾಕಿಸ್ತಾನ(India vs Pakistan) ನಡುವಿನ ಕ್ರಿಕೆಟ್‌ ಪಂದ್ಯಾಟವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಟಾಸ್‌ ಗೆದ್ದು ಪಾಕಿಸ್ತಾನ ತಂಡವನ್ನು ಭಾರತವು ಬ್ಯಾಟಿಂಗ್‌ ಗೆ ಇಳಿಸಿತ್ತು. ಮುಹಮ್ಮದ್‌ ರಿಝ್ವಾನ್‌ ರ ಉತ್ತಮ ಪ್ರದರ್ಶನದೊಂದಿಗೆ ಪಾಕಿಸ್ತಾನ ತಂಡವು 19.5 ಓವರ್‌ ಗಳಲ್ಲಿ‌ 147 ರನ್‌ ಗಳಿಗೆ ಎಲ್ಲಾ ವಿಕೆಟ್‌ ಗಳನ್ನು ಕಳೆದುಕೊಳ್ಳುವ ಮೂಲಕ ಒಟ್ಟು 148 ರನ್‌ ಗಳ ಗುರಿಯನ್ನು ನೀಡಿದೆ. 

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 15 ರನ್‌ ಗಳಿರುವಾಗಲೇ ಪ್ರಮುಖ ಆಟಗಾರ ಬಾಬರ್‌ ಅಝಮ್‌ ರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಫಕರ್‌ ಝಮಾನ್‌ ಮತ್ತು ಬಾಬರ್‌ 10 ರನ್‌ ಗಳಿಗೆ ತಮ್ಮ ವಿಕೆಟ್‌ ಒಪ್ಪಿಸಿದರು. ಬಳಿಕ ಮುಹಮ್ಮದ್‌ ರಿಝ್ವಾನ್‌ ಉತ್ತಮ ಪ್ರದರ್ಶನದೊಂದಿಗೆ 43 ರನ್‌ ಗಳಿಸಿ ಪಾಕಿಸ್ತಾನ ತಂಡಕ್ಕೆ ನೆರವಾದರು. 

ಬೌಲಿಂಗ್‌ ವಿಭಾಗದಲ್ಲಿ ಮಾರಕ ದಾಳಿ ಸಂಘಟಿಸಿದ ವೇಗಿಗಳಾದ ಭುವನೇಶ್ವರ್‌ ಕುಮಾರ್‌ ನಾಲ್ಕು ವಿಕೆಟ್, ಆವೇಶ್‌ ಖಾನ್‌‌ 1, ಅರ್ಶ್‌ದೀಪ್‌ ಸಿಂಗ್   2 ವಿಕೆಟ್‌ ಪಡೆದರೆ, ಹಾರ್ದಿಕ್‌ ಪಾಂಡ್ಯ ಪ್ರಮುಖ ಮೂರು ವಿಕೆಟ್‌ ಗಳನ್ನು ಕಿತ್ತು ಮಿಂಚಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News