×
Ad

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 'ಅರ್ಥಹೀನ'ವಾಗಿದೆ: ಗುಲಾಂ ನಬಿ ಆಝಾದ್

Update: 2022-08-29 12:06 IST

ಹೊಸದಿಲ್ಲಿ: ಕಳೆದ ವಾರ ಕಾಂಗ್ರೆಸ್ ತೊರೆದಿರುವ  ಗುಲಾಂ ನಬಿ ಆಝಾದ್ (Ghulam Nabi Azad) ಅವರು ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು(CWC) 'ಅರ್ಥಹೀನ'ವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಎಡ,ಬಲ, ಮಧ್ಯ ಸೇರಿದಂತೆ ಎಲ್ಲ ಕಡೆಯಿಂದಲೂ ದಾಳಿ ಮಾಡುವುದು  ರಾಹುಲ್ ಗಾಂಧಿಯವರ ನೀತಿಯಾಗಿದೆ" ಎಂದು ಅವರು ಹೇಳಿದ್ದಾರೆ.

"ಈಗಿನ CWC ಅರ್ಥಹೀನವಾಗಿದೆ. ಸೋನಿಯಾ ಗಾಂಧಿಯವರ ಅಡಿಯಲ್ಲಿ CWC ಮಾತ್ರ ಇತ್ತು. ಆದರೆ ಕಳೆದ 10 ವರ್ಷಗಳಲ್ಲಿ, 25 CWC ಸದಸ್ಯರು ಹಾಗೂ  50 ವಿಶೇಷ ಆಹ್ವಾನಿತರು ಇದ್ದಾರೆ" ಎಂದು ಆಝಾದ್ NDTV ಗೆ ತಿಳಿಸಿದರು.

ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ  ಸೋನಿಯಾ ಗಾಂಧಿ ಹೆಚ್ಚಿನ ಮಟ್ಟಿಗೆ ಸಮಾಲೋಚನಾ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು. ಆದರೆ ಅದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಾಶವಾಯಿತು ಎಂದರು.

"ಸೋನಿಯಾ ಗಾಂಧಿ 1998 ಹಾಗೂ 2004 ರ ನಡುವೆ ಅವರು ಸಂಪೂರ್ಣವಾಗಿ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಅವರು ಅವರು ನನಗೆ ಎಂಟು ರಾಜ್ಯಗಳ  ಜವಾಬ್ದಾರಿ ನೀಡಿದ್ದರು. ನಾನು ಏಳನ್ನು ಗೆದ್ದಿದ್ದೇನೆ, ಅವರು ಹಸ್ತಕ್ಷೇಪ ಮಾಡಲಿಲ್ಲ. ಆದರೆ ರಾಹುಲ್ ಗಾಂಧಿ ಬಂದ ನಂತರ 2004 ರಿಂದ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಯ ಮೇಲೆ ಹೆಚ್ಚು ಅವಲಂಬಿತರಾಗಲು ಆರಂಭಿಸಿದರು. ರಾಹುಲ್ ಅವರಿಗೆ ಅದನ್ನು ಮಾಡುವ ಯಾವುದೇ ಯೋಗ್ಯತೆ ಇರಲಿಲ್ಲ. ಎಲ್ಲರೂ ರಾಹುಲ್ ಗಾಂಧಿಯೊಂದಿಗೆ ಸಮನ್ವಯ ಸಾಧಿಸಬೇಕೆಂದು ಅವರು ಬಯಸಿದ್ದರು" ಎಂದು ಆಝಾದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News