×
Ad

ಪಾಕ್ ವಿರುದ್ಧ ಭಾರತ ಜಯಗಳಿಸಿದ ಬಳಿಕ ರಾಷ್ಟ್ರಧ್ವಜವನ್ನು ಕೈಯ್ಯಲ್ಲಿ ಹಿಡಿಯಲು ನಿರಾಕರಿಸಿದ ಜಯ್ ಶಾ!

Update: 2022-08-29 12:54 IST

ಹೊಸದಿಲ್ಲಿ: ಏಷ್ಯಾ ಕಪ್ 2022 ಭಾಗವಾಗಿ ರವಿವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನದೆದುರು ಭಾರತಕ್ಕೆ(India vs Pakistan) ದೊರೆತ ಜಯದಿಂದ ಸ್ಟೇಡಿಯಂನಲ್ಲಿದ್ದ ಭಾರತೀಯ ಅಭಿಮಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮ ಆಚರಿಸಿದರೆ, ಸ್ಟೇಡಿಯಂನಲ್ಲಿ ಹಾಜರಿದ್ದ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ(Jay Shah) ಅವರು ಅಲ್ಲಿದ್ದವರೊಬ್ಬರು ಅವರಿಗೆ ರಾಷ್ಟ್ರಧ್ವಜ ನೀಡಲು ಯತ್ನಿಸಿದಾಗ ಅದನ್ನು ನಿರಾಕರಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಟಿಆರ್ ಎಸ್ ನಾಯಕರೊಬ್ಬರು "ಅದು ಬೇರೆ ಬಿಜೆಪಿಯೇತರ ನಾಯಕನಾಗಿದ್ದರೆ ಬಿಜೆಪಿ ಐಟಿ ಘಟಕ ಗಡಣವೇ ಅವರನ್ನು ದೇಶದ್ರೋಹಿ ಎಂದು ಹೇಳುತ್ತಿತ್ತಲ್ಲದೆ ಗೋದಿ ಮೀಡಿಯಾ ಕೂಡ ಇಡೀ ದಿನ ಅದನ್ನು ಚರ್ಚಿಸುತ್ತಿತ್ತು.... ಆದರೆ ಅದೃಷ್ಟವಶಾತ್ ಇವರು ಶೆಹೆನ್‍ಶಾ ಅವರ ಪುತ್ರ ಜಯ್ ಶಾ,'' ಎಂದು ಬರೆದಿದ್ದಾರೆ.

"ಈಗ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ತ್ರಿವರ್ಣ ಧ್ವಜವನ್ನು ಬೀಸಲು ಜಯ್ ಶಾ  ಅವರು ಏಕೆ ನಿರಾಕರಿಸಿದರು? ಯಾವುದೇ ಭಾರತೀಯರು ಅದನ್ನು ಸಹಜವಾಗಿ ಮಾಡುತ್ತಿದ್ದರು. ಅವರಿಗೆ ಭಗವಾಧ್ವಜ ಅಥವಾ ಬಿಜೆಪಿ ಧ್ವಜ ಬೇಕಿತ್ತಾ?" ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಇದೇ ವೀಡಿಯೋವನ್ನು ಟ್ವೀಟ್ ಮಾಡಿದ ಮಹಾರಾಷ್ಟ್ರದ ಕಾಂಗ್ರೆಸ್ ಘಟಕದ ಟ್ವಿಟರ್ ಹ್ಯಾಂಡಲ್, "ಭಾರತದ ಗೃಹ ಸಚಿವರ ಪುತ್ರ ಭಾರತದ ರಾಷ್ಟ್ರ ಧ್ವಜವನ್ನೇಕೆ ಸ್ವೀಕರಿಸುತ್ತಿಲ್ಲ?'' ಎಂದು ಪ್ರಶ್ನಿಸಿದೆ.

ಸಾಮಾಜಿಕ ಜಾಲತಾಣದಾದ್ಯಂತ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ನಾಯಕರು ಸೇರಿದಂತೆ ಹಲವರು ಜಯ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಮುರುಘಾ ಮಠದ ಸ್ವಾಮೀಜಿ ಪೊಲೀಸ್ ವಶಕ್ಕೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News