ಆಯುಷ್ಮಾನ್ ಭಾರತ್ ಯೋಜನೆಯಡಿ ಹಗರಣ ಆರೋಪ: ವೈದ್ಯ ದಂಪತಿ ವಿರುದ್ಧ ವಂಚನೆ ಪ್ರಕರಣ

Update: 2022-08-29 09:58 GMT

ಭೋಪಾಲ್: ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಭಾರೀ ಮೊತ್ತವನ್ನು ಲಪಟಾಯಿಸುವ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಮಧ್ಯಪ್ರದೇಶದ ವೈದ್ಯ ದಂಪತಿ ವಿರುದ್ಧ ವಂಚನೆ ಹಾಗೂ  ಫೋರ್ಜರಿ ( A doctor couple in Madhya Pradesh has been charged with cheating and forgery )ಆರೋಪ ಹೊರಿಸಲಾಗಿದೆ.

ಡಾ. ಅಶ್ವಿನಿ ಪಾಠಕ್ ಹಾಗೂ ಡಾ. ದುಹಿತಾ ಪಾಠಕ್ ಜಬಲ್ಪುರದಲ್ಲಿ ಸೆಂಟ್ರಲ್ ಇಂಡಿಯಾ ಕಿಡ್ನಿ ಆಸ್ಪತ್ರೆಯನ್ನು ಹೊಂದಿದ್ದಾರೆ. ಸುಮಾರು 70 ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಹೊಂದಿರುವವರನ್ನು ಆಸ್ಪತ್ರೆಯ ಪಕ್ಕದಲ್ಲಿರುವ ಹೋಟೆಲ್‌ಗೆ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಸ್ಪತ್ರೆಯ ದಾಖಲೆಗಳಲ್ಲಿ ಅವರ ರೋಗಲಕ್ಷಣಗಳು ಹಾಗೂ  ಅವರ ರೋಗನಿರ್ಣಯದ ನಡುವೆ ಯಾವುದೇ ಸಂಬಂಧವಿಲ್ಲ ಎಂದು  ಪ್ರಾಥಮಿಕ ತನಿಖೆ ಕಂಡುಬಂದಿದೆ.

ಸುಮಾರು 70 ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳನ್ನು ಜಬಲ್ಪುರದ ಹೊಟೇಲ್ ನಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ.  ಹಲವು ಕೊಠಡಿಗಳಲ್ಲಿ ಇಬ್ಬರು ರೋಗಿಗಳನ್ನು ಒಂದೇ ರೂಮ್ ನಲ್ಲಿ ಇರಿಸಲಾಗಿದೆ. ಹೊಟೇಲ್ ಕಮ್ ಆಸ್ಪತ್ರೆಯನ್ನು ರವಿವಾರ ಸೀಲ್ ಮಾಡಲಾಗಿದೆ ಎಂದು ಅನುರಾಗ್ ದ್ವಾರಿ ಎನ್ನುವವರು ಟ್ವಿಟಿಸಿದ್ದಾರೆ.

ದಂಪತಿ ವಿರುದ್ಧ ನಕಲಿ ಹಾಗೂ  ವಂಚನೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ್ ಖಂಡೇಲ್ ತಿಳಿಸಿದ್ದಾರೆ. ಡಾ ಅಶ್ವಿನಿ ಪಾಠಕ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News