ಅದಾನಿ ಕ್ರಮ ಮಾನ್ಯವಾಗಿದೆಯೇ ಎಂದು ಸೆಬಿಗೆ ಕೇಳಿ ಪತ್ರ ಬರೆದ ಎನ್‍ಡಿಟಿವಿ ಸಹಸ್ಥಾಪಕರು

Update: 2022-08-29 10:10 GMT

ಹೊಸದಿಲ್ಲಿ: ಸೆಕ್ಯುರಿಟೀಸ್ ಮಾರ್ಕೆಟ್‍ನಲ್ಲಿ ಯಾವುದೇ ವ್ಯವಹಾರ ನಡೆಸದಂತೆ ಎನ್‍ಡಿಟಿವಿ(NDTV) ಪ್ರವರ್ತಕರಿಗೆ ನಿರ್ಬಂಧ ವಿಧಿಸಿ ಸೆಬಿ(SEBI) 2020 ರಲ್ಲಿ ಹೊರಡಿಸಿರುವ ಆದೇಶವು ತನ್ನ ಷೇರುಗಳನ್ನು ಅದಾನಿ ಸಮೂಹ ಖರೀದಿಸುವುದರಿಂದ ತಡೆಯುತ್ತದೆಯೇ ಎಂಬ ಕುರಿತು ಸ್ಪಷ್ಟೀಕರಣ ಕೋರಿ ಎನ್‍ಡಿಟಿವಿ ರವಿವಾರ ಸೆಬಿಗೆ ಪತ್ರ ಬರೆದಿದೆ.

ತನ್ನ ಅಂಗಸಂಸ್ಥೆಯಾಗಿರುವ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಮುಖಾಂತರ ಎನ್‍ಡಿಟಿವಿಯಲ್ಲಿನ ಶೇ 29.18 ಪಾಲು ಬಂಡವಾಳವನ್ನು ಸ್ವಾಧೀನಪಡಿಸುವುದಾಗಿ ಗೌತಮ್ ಅದಾನಿ ಒಡೆತನದ ಅದಾನಿ(Adani) ಎಂಟರ್‍ಪ್ರೈಸಸ್ ಕಳೆದ ಮಂಗಳವಾರ ಹೇಳಿತ್ತು. ಈ ಶೇ 29.18  ಪಾಲು ಬಂಡವಾಳವನ್ನು ಎನ್‍ಡಿಟಿವಿಯ ಸಹ ಸ್ಥಾಪಕರಾದ ರಾಧಿಕಾರ ರಾಯ್ ಮತ್ತು ಪ್ರಣಯ್ ರಾಯ್ ಅವರು ಪ್ರವರ್ತಕ ಸಂಸ್ಥೆ ರಾಧಿಕಾ ರಾಯ್ ಪ್ರಣವ್ ರಾಯ್ ಪ್ರೈವೇಟ್ ಲಿಮಿಟೆಡ್ ಮೂಲಕ ಹೊಂದಿದ್ದಾರೆ.

ನವೆಂಬರ್ 27, 2020ರಲ್ಲಿ ಸೆಬಿ ಆದೇಶ ಹೊರಡಿಸಿ ನವೆಂಬರ್ 26, 2022ರ ತನಕ ರಾಯ್‍ಗಳಿಗೆ ಸೆಬಿ ಮಾರುಕಟ್ಟೆ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಿತ್ತು. ಇದೇ ಆದೇಶವನ್ನು ಮುಂದಿಟ್ಟುಕೊಂಡಿರುವ ಎನ್‍ಡಿಟಿವಿ ಅದಾನಿ ಗ್ರೂಪ್ ಸಂಸ್ಥೆಯ ಶೇ 29.18 ಪಾಲನ್ನು ತನ್ನದಾಗಿಸುವ ಮುನ್ನ ಸೆಬಿ ಅನುಮತಿ ಪಡೆದುಕೊಳ್ಳಬೇಕಿದೆ ಎಂದು ಹೇಳಿದೆ.

ಆದರೆ ಎನ್‍ಡಿಟಿವಿ ಸಹ ಸ್ಥಾಪಕರ ವಾದಗಳು ಆಧಾರರಹಿತ ಹಾಗೂ ಕಾನೂನಿನಡಿ ಮಾನ್ಯವಾಗದು ಎಂದು ಅದಾನಿ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಪ್ರಥಮ ಬಾರಿ ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News