×
Ad

ಇಂಡೋನೇಶ್ಯಾ ದ್ವೀಪದಲ್ಲಿ ಸತತ 3 ಪ್ರಬಲ ಭೂಕಂಪ

Update: 2022-08-29 23:30 IST
PHOTO : REUTERS

ಜಕಾರ್ತ, ಆ.29: ಇಂಡೋನೇಶ್ಯಾ ದ್ವೀಪದಲ್ಲಿ ಸೋಮವಾರ ಸತತ 3 ಪ್ರಬಲ ಭೂಕಂಪ ಸಂಭವಿಸಿದೆ. ಆದರೆ ಸುನಾಮಿಯ ಎಚ್ಚರಿಕೆ ನೀಡಲಾಗಿಲ್ಲ ಎಂದು ಆ ದೇಶದ ಹವಾಮಾನ ಮತ್ತು ಭೂ ಭೌತಶಾಸ್ತ್ರ ಇಲಾಖೆ ಹೇಳಿದೆ.

ರವಿವಾರ ಮಧ್ಯರಾತ್ರಿ ಕಳೆದು ಕೆಲ ಕ್ಷಣಗಳಲ್ಲೇ 5.2 ತೀವ್ರತೆಯ ಭೂಕಂಪ ಸಂಭವಿಸಿದ್ದರೆ ಸುಮಾರು 1 ಗಂಟೆಯ ಬಳಿಕ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಳಿಗ್ಗೆ 10:30ರ ವೇಳೆಗೆ 6.1 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿ ಜನತೆ ಆತಂಕಗೊಂಡರು . ಸುಮಾತ್ರಾ ದ್ವೀಪದ ಪಶ್ಚಿಮ ಕರಾವಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ. 6.1 ತೀವ್ರತೆಯ ಭೂಕಂಪದಿಂದ ಮೆಂಟಾವೆಯ್ ದ್ವೀಪದಲ್ಲಿ ಕೆಲ ಸೆಕೆಂಡ್‌ಗಳ ಕಾಲ ಭೂಮಿಕಂಪಿಸಿದ್ದು ಸಮೀಪದ ಸಿಬೆರುತ್ ದ್ವೀಪದಲ್ಲಿ ಹಲವು ಕಟ್ಟಡಗಳಿಗೆ ಅಲ್ಪಪ್ರಮಾಣದ ಹಾನಿಯಾಗಿದೆ. ನೊವ್ರಿಯಾಡಿ ಪ್ರದೇಶದಲ್ಲಿ ಚರ್ಚ್, ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದ್ದು ಹಲವು ಗ್ರಾಮಗಳ ನಿವಾಸಿಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಹಲವೆಡೆ ಪಶ್ಚಾತ್ ಕಂಪನ ಸಂಭವಿಸಬಹುದು. ಆದರೆ ಸುನಾಮಿಯ ಸಾಧ್ಯತೆ ಇಲ್ಲ, ಜನತೆ ಯಾವುದೇ ಗಾಳಿ ಸುದ್ಧಿಗೆ ಕಿವಿಗೊಡಬಾರದು ಎಂದು ಅಧಿಕಾರಿಗಳು ಸ್ಥಳೀಯರಿಗೆ ಸೂಚನೆ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News