ಕಾಸರಗೋಡು ಜಿಲ್ಲಾದ್ಯಂತ ಭಾರೀ ಗಾಳಿಮಳೆ: ಹಲವೆಡೆ ಹಾನಿ, ನಷ್ಟ
Update: 2022-08-30 11:54 IST
ಕಾಸರಗೋಡು, ಆ.30: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಗುಡುಗು ಮಿಂಚು, ಗಾಳಿಯಿಂದ ಕೂಡಿದ ಭಾರೀ ಮಳೆ ಸುರಿದಿದ್ದು, ಹಲವೆಡೆ ಅಪಾರ ನಾಶ ನಷ್ಟ ಉಂಟಾಗಿದೆ.
ಮುಳಿಯಾರು ಪತ್ತನಡ್ಕ ಕಡಪ್ಪಂಗಾಲ್ ನಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಮನೆ ಭಾಗಶಃ ಹಾನಿಯಾಗಿದೆ. ಇಲ್ಲಿನ ಸಾವಿತ್ರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಹಾನಿ ಉಂಟಾಗಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಗೌತಮ್ ಅದಾನಿ
ಕಾನತ್ತೂರಿನ ಮುರಳಿ, ಮೋಹನ್ ಎಂಬವರ ಮನೆ ಮೇಲೂ ಮಣ್ಣು ಕುಸಿದು ಬಿದ್ದಿದ್ದು, ಮನೆಗಳಿಗೆ ಹಾನಿ ಸಂಭವಿಸಿದೆ
ತೋಟದಮೂಲೆ ರಸ್ತೆ ಮಳೆಗೆ ಕೊಚ್ಚಿ ಹೋಗಿದೆ. ಹಲವೆಡೆ ಕೃಷಿ ಹಾನಿ ಉಂಟಾದ ಬಗ್ಗೆಯೂ ವರದಿಯಾಗಿದೆ.