ಭಟ್ಕಳ: ಅಕ್ರಮ ಗಣಿಗಾರಿಕೆ ಆರೋಪ; ಲಾರಿ ವಶಕ್ಕೆ
Update: 2022-08-30 22:34 IST
ಭಟ್ಕಳ: ಅಕ್ರಮವಾಗಿ ಗಣಿಗಾರಿಕೆ ಮಾಡಿ, ಮಣ್ಣನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಲಾರಿಯೊಂದನ್ನು ನಗರದ ಕಾಮಾಕ್ಷಿ ಪೆಟ್ರೋಲ್ ಪಂಪ್ ಬಳಿ ತಡೆದ ತಹಶೀಲ್ದಾರ್ ಸುಮಂತ ಬಿ.ಇ. ಲಾರಿಯನ್ನು ಗ್ರಾಮೀಣ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ.
ಈ ಕುರಿತಂತೆ ದೂರವಾಣಿ ಮೂಲಕ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಈರಪ್ಪ ಗರ್ಡಿಕರ್ ಎಂಬುವರಿಗೆ ಸೇರಿದ ಲಾರಿಯಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದು ಮಾಹಿತಿ ಪಡೆದು ಅದನ್ನು ವಶಕ್ಕೆ ಪಡೆದಿದ್ದು ವಿಚಾರಣೆಗಾಗಿ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಕ್ರಮವಾಗಿ ಗಣಿಗಾರಿಕೆ ಮಾಡಿ ಮಣ್ಣು ತುಂಬಿದ ಲಾರಿ ವೆಂಕಟಾಪುರಕ್ಕೆ ತೆರಳುತ್ತಿತ್ತು. ಈ ವೇಳೆ ಅದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ತಹಶೀಲ್ದಾರ್ ಸುಮಂತ್ ಅವರು ಖುದ್ದು ತಾವೇ ಲಾರಿಯನ್ನು ತಡೆದು ಭಟ್ಕಳ ಗ್ರಾಮೀಣ ಠಾಣೆಯ ವಶಕ್ಕೆ ನೀಡಿದ್ದಾರೆ.