ಅಲ್‌-ಖೈದಾ ನಂಟು ಆರೋಪ: ಮೂರನೇ ಮದ್ರಸಾವನ್ನು ಬುಲ್ಡೋಝರ್‌ ಮೂಲಕ ನೆಲಸಮಗೊಳಿಸಿದ ಅಸ್ಸಾಂ ಸರಕಾರ

Update: 2022-08-31 08:41 GMT

ಗುವಾಹಟಿ: ಅಲ್-ಖೈದಾ(Al-Qaida) ಜೊತೆಗಿನ ನಂಟು ಆರೋಪದ ಮೇರೆಗೆ ಬೊಂಗೈಗಾಂವ್ ಜಿಲ್ಲೆಯಲ್ಲಿ ಮತ್ತೊಂದು ಮದರಸಾವನ್ನು(Madrasa) ಅಸ್ಸಾಂ ಸರ್ಕಾರ ಬುಧವಾರ ನೆಲಸಮಗೊಳಿಸಿದೆ. ಈ ಶಿಕ್ಷಣ ಸಂಸ್ಥೆಗಳನ್ನು ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರವಾಗಿ ಬಳಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ ಬಳಿಕ ಸರ್ಕಾರವು ಈ ತಿಂಗಳು ರಾಜ್ಯದಲ್ಲಿ ಧ್ವಂಸಗೊಳಿಸಿರುವ ಮೂರನೇ ಮದರಸಾ ಇದಾಗಿದೆ.

ಮದ್ರಸಾ ಮರ್ಕಝುಲ್ ಮಾರಿಫ್ ಕರಿಯಾನಾ ಎಂಬ ಎರಡು ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಜಿಲ್ಲಾಡಳಿತವು ಕಟ್ಟಡವನ್ನು ನೆಲಸಮಗೊಳಿಸಲು ಎಂಟು ಬುಲ್ಡೋಜರ್‌ಗಳನ್ನು(Buldozer) ಬಳಸಿದೆ. ಇದಕ್ಕೂ ಮೊದಲು ಶುಕ್ರವಾರ, ಮದ್ರಸಾದ ಶಿಕ್ಷಕರಲ್ಲಿ ಒಬ್ಬರಾದ ಮುಫ್ತಿ ಹಫೀಝುರ್ ರೆಹಮಾನ್ ಅವರನ್ನು ಭಾರತೀಯ ಉಪಖಂಡದಲ್ಲಿ (ಎಕ್ಯೂಐಎಸ್) ಅಲ್ ಖೈದಾ ಸದಸ್ಯ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದರು.

ಮಂಗಳವಾರ, ಪೊಲೀಸರು ಮದರಸಾದ ಮೇಲೆ ದಾಳಿ ನಡೆಸಿದರು ಮತ್ತು ಹಲವಾರು ಆಕ್ಷೇಪಾರ್ಹ ವಸ್ತುಗಳು ಮತ್ತು ಪುಸ್ತಕಗಳನ್ನು ಪತ್ತೆಹಚ್ಚಲಾಗಿದೆ ಎಂದಿದ್ದರು. ಮುಫ್ತಿ ಹಫೀಝುರ್ ರೆಹಮಾನ್ 2018 ರಲ್ಲಿ ಮದ್ರಸಾದಲ್ಲಿ ಶಿಕ್ಷಕರಾಗಿ ಸೇರಿದ್ದರು.

ಒಂದೇ ಕ್ಯಾಂಪಸ್‌ನಲ್ಲಿ ವಿವಿಧೋದ್ದೇಶ ಚಟುವಟಿಕೆಗಳನ್ನು ನಡೆಸಲು ಅಗತ್ಯ ದಾಖಲೆಗಳನ್ನು ಹೊಂದಿಲ್ಲ ಮತ್ತು ಸಾಕಷ್ಟು ನಿಬಂಧನೆಗಳನ್ನು ಹೊಂದಿಲ್ಲ ಎಂಬ ಕಾರಣಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಂಗಳವಾರ ಮದರಸಾವನ್ನು ನೆಲಸಮಗೊಳಿಸಿದ್ದಾರೆ. ಮದರಸಾದಲ್ಲಿ ತಂಗಿದ್ದ ಸುಮಾರು 200 ವಿದ್ಯಾರ್ಥಿಗಳನ್ನು ಜಿಲ್ಲಾ ಅಧಿಕಾರಿಗಳು ಮಂಗಳವಾರ ಸ್ಥಳಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News