×
Ad

‘ಮಾದಕ ವಸ್ತುಗಳನ್ನು ಮಾರಾಟ ಮಾಡುವವರು, ಬಳಸುವರು ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ಹೊರಗೆ’

Update: 2022-08-31 19:21 IST
ಸಾಂದರ್ಭಿಕ ಚಿತ್ರ

ಕಾಸರಗೋಡು: ಕಾಞಂಗಾಡ್‌ ಪಾಡನ್ನಕ್ಕಾವ್ ಮುಹಿಯುದ್ದೀನ್‌ ಜುಮಾ ಮಸೀದಿಯ ಮೊಹಲ್ಲಾ ಕಮಿಟಿಯಲ್ಲಿ ಸುಮಾರು 580 ಜಮಾಅತ್‌ಗೆ ಒಳಪಟ್ಟ ಕುಟುಂಬಗಳಿದ್ದು, ಇಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು, ಅದನ್ನು ಬಳಸುವವರನ್ನು ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ಹೊರಗಿಡಲು ಮೊಹಲ್ಲಾ ಕಮಿಟಿ ತೀರ್ಮಾನಿಸಿದೆ.

ಪ್ರಾಥಮಿಕ ಸದಸ್ಯತ್ವಕ್ಕೆ ಅನರ್ಹರಾದವರ ವಿವಾಹ ಹಾಗು ಇನ್ನಿತರ ಕಾರ್ಯಕ್ರಮಗಳಿಗೆ ಮಸೀದಿಯ ಕಮಿಟಿ ಯಾವುದೇ ರೀತಿಯ ಸಹಕಾರ ನೀಡದಿರಲೂ ನಿರ್ಧರಿಸಿದೆ.

ಪಾಡನ್ನಕ್ಕಾವ್ ಮೊಹಲ್ಲಾ ಕಮಿಟಿ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮ, ಜಾಗೃತಿ ಶಿಬಿರಗಳನ್ನು  ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲಾ ಪೊಲೀಸ್‌, ಕಾಞಂಗಾಡ್‌ ಡಿವೈಎಸ್ಪಿ ಹಾಗು ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಮೊಹಲ್ಲಾ ಕಮಿಟಿಯ ಈ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ.

ಕಾಸರಗೋಡು ಜಿಲ್ಲಾ ಪೊಲೀಸ್‌ ಅಧಿಕಾರಿ ಡಾ. ವೈಭವ್‌ ಸಕ್ಸೇನ ಐಪಿಎಸ್‌ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವೊಂದು "ಕ್ಲೀನ್‌ ಕಾಸರಗೋಡು" ಎಂಬ ಹೆಸರಿನಲ್ಲಿ ಕಾರ್ಯಾರಣೆ ನಡೆಸುತ್ತಿದೆ. ಇದು ಮಾದಕ ವಸ್ತುಗಳನ್ನು ಉಪಯೋಗಿಸುತ್ತಿರುವವರ ವಿರುದ್ಧ ನಡೆಸುತ್ತಿರುವಂತಹ ಕಾರ್ಯಾಚರಣೆಯಾಗಿದೆ.

ಪಾಡನ್ನಕ್ಕಾವ್ ಮೊಹಲ್ಲಾ ಕಮಿಟಿಯು ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಅವನ್ನು ಉಪಯೋಗಿಸುವವರ ವಿರುದ್ಧ ತೆಗೆದುಕೊಂಡಿರುವ ತೀರ್ಮಾನವು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News