×
Ad

ಮಂಗಳೂರು; ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

Update: 2022-08-31 20:34 IST

ಮಂಗಳೂರು, ಆ.31: ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಸಮಿತಿ ವತಿಯಿಂದ ಪಾಣಕ್ಕಾಡ್ ಸಯ್ಯದ್ ಉಮರಲೀ ಶಿಹಾಬ್ ತಂಙಳ್ ಅನುಸ್ಮರಣೆಯ ಅಂಗವಾಗಿ ಡಿಸೆಂಬರ್ 4ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆ ಪ್ರಯುಕ್ತ ಏಳು ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಪಾಣಕ್ಕಾಡ್ ಸಯ್ಯಿದ್ ಮುನವ್ವರಲೀ ಶಿಹಾಬ್ ತಂಙಳ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ.

ಆರ್ಥಿಕವಾಗಿ ತೀರಾ ಹಿಂದುಳಿದ ಹಾಗೂ ಯತೀಮ್  ಹೆಣ್ಣು ಮಕ್ಕಳು ಎಲ್ಲರಂತೆ ಉತ್ತಮ‌ ದಾಂಪತ್ಯ ಜೀವನ ಕಾಣುವಂತಾಗಬೇಕೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂಬಂಧ ವಧು- ವರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಪಡೆದುಕೊಳ್ಳಲು 9632961108 , 8050238864, 6361893345 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೇಯ ದಿನವಾಗಿದೆ ಎಂದು ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಸಮಿತಿ ಅಧ್ಯಕ್ಷರಾದ ಅಶ್ರಫ್ ಸಾಲುಮರ ಬಂಗೇರಕಟ್ಟೆ ಅವರು ಪ್ರಕಟನೆಯಲ್ಲಿ ತಿಸಿದ್ದಾರೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News