ವಿರಾಟ್ ಕೊಹ್ಲಿ,‌ ಸೂರ್ಯ ಕುಮಾರ್ ಯಾದವ್‌ ಅರ್ಧಶತಕ: ಹಾಂಕಾಂಗ್‌ ಗೆ ಸವಾಲಿನ ಗುರಿ ನೀಡಿದ ಭಾರತ

Update: 2022-08-31 17:24 GMT
Photo: Twitter/BCCI

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಶ್ಯಾಕಪ್‌-ಟಿ20 ಪಂದ್ಯಾವಳಿಯ ನಾಲ್ಕನೇ ಪಂದ್ಯಾಟದಲ್ಲಿ ಹಾಂಕಾಂಗ್‌ ವಿರುದ್ಧ ಭಾರತ ತಂಡವು ಸವಾಲಿನ ಮೊತ್ತವನ್ನು ಪೇರಿಸಿದ್ದು, ಕೇವಲ ಎರಡು ವಿಕೆಟ್‌ ನಷ್ಟಕ್ಕೆ 192 ರನ್‌ ಗಳಿಸುವ ಮೂಲಕ ಹಾಂಕಾಂಗ್‌ ತಂಡಕ್ಕೆ 193 ರನ್‌ ಗಳ ಗುರಿಯನ್ನು ನೀಡಿದೆ. 

ಟಾಸ್‌ ಗೆದ್ದ ಹಾಂಕಾಂಗ್‌ ತಂಡವು ಫೀಲ್ಡಿಂಗ್‌ ಆಯ್ಕೆ ಮಾಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ರ ವಿಕೆಟ್‌ ಅನ್ನು ಬೇಗನೇ ಕಳೆದುಕೊಂಡಿತು. ಬಳಿಕ ಸೂರ್ಯಕುಮಾರ್‌ ಯಾದವ್‌ ಹಾಗೂ ವಿರಾಟ್‌ ಕೊಹ್ಲಿ ಅದ್ಭುತ ಅರ್ಧಶತಕದ ಮೂಲಕ ತಂಡವನ್ನು ಸವಾಲಿನ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾದರು. ವಿರಾಟ್‌ ಕೊಹ್ಲಿ 59 ರನ್‌ ಗಳಿಸಿದರೆ, ಸೂರ್ಯಕುಮಾರ್‌ ಯಾದವ್‌ ಕೇವಲ 26 ಎಸೆತಗಳಲ್ಲಿ 6 ಸಿಕ್ಸರ್‌ ಗಳೊಂದಿಗೆ 68 ರನ್‌ ಗಳಿಸಿದರು. 

ಹಾಂಕಾಂಗ್‌ ಪರ ಆಯುಶ್‌ ಶುಕ್ಲಾ ಹಾಗೂ ಮುಹಮ್ಮದ್‌ ಗಝನ್ಫರ್‌ ತಲಾ ಒಂದು ವಿಕೆಟ್‌ ಪಡೆದರು. ಮೊದಲ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News