ಅಮೆರಿಕ: ಭಾರತೀಯ-ಅಮೆರಿಕನ್ ವ್ಯಕ್ತಿಗೆ ಭಾರತೀಯನಿಂದಲೇ ಜನಾಂಗೀಯ ನಿಂದನೆ, ಪ್ರಕರಣ ದಾಖಲು

Update: 2022-09-01 04:37 GMT
ತೇಜಿಂದರ್ ಸಿಂಗ್,  photo:twitter

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ-ಅಮೆರಿಕನ್ ವ್ಯಕ್ತಿಯೊಬ್ಬರು ತಮ್ಮದೇ ದೇಶದ ನಾಗರಿಕನಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ(An Indian-American man has been racially abused by a compatriot ). ಟೆಕ್ಸಾಸ್‌ನಲ್ಲಿ ನಾಲ್ವರು ಭಾರತೀಯ ಮೂಲದ ಮಹಿಳೆಯರ ವಿರುದ್ಧ ಅಮೆರಿಕದ ಮಹಿಳೆಯೊಬ್ಬರು ಜನಾಂಗೀಯ ನಿಂದನೆ ಮಾಡಿದ ಬಳಿಕ ಮತ್ತೊಂದು ದ್ವೇಷದ ಅಪರಾಧ ವರದಿಯಾಗಿದೆ.

ಆಗಸ್ಟ್ 21 ರಂದು ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಗ್ರಿಮ್ಮರ್ ಬೌಲೆವಾರ್ಡ್‌ನಲ್ಲಿರುವ ಟ್ಯಾಕೋ ಬೆಲ್‌ನಲ್ಲಿ 37 ವರ್ಷದ ತೇಜಿಂದರ್ ಸಿಂಗ್ ಅವರು ಕೃಷ್ಣನ್ ಜಯರಾಮನ್ ಮೇಲೆ ಜನಾಂಗೀಯ ನಿಂದನೆಯ ಸುರಿಮಳೆ  ಮಾಡಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ಬುಧವಾರ ವರದಿ ಮಾಡಿದೆ.

ಯೂನಿಯನ್ ಸಿಟಿಯ ತೇಜಿಂದರ್ ಸಿಂಗ್ ವಿರುದ್ಧ ನಾಗರಿಕ ಹಕ್ಕುಗಳ ಉಲ್ಲಂಘನೆ, ಹಲ್ಲೆ, ಆಕ್ಷೇಪಾರ್ಹ ಭಾಷೆಯಿಂದ ಶಾಂತಿ ಕದಡುವ ದ್ವೇಷದ ಅಪರಾಧದ ಆರೋಪವನ್ನು ಸೋಮವಾರ ಹೊರಿಸಲಾಗಿದೆ ಎಂದು ಫ್ರೀಮಾಂಟ್ ಪೊಲೀಸ್ ಇಲಾಖೆ ತಿಳಿಸಿದೆ.

ತೇಜಿಂದರ್ ಸಿಂಗ್ ಅವರನ್ನು ಪ್ರಕರಣದ  ದಾಖಲೆಗಳಲ್ಲಿ "ಏಷ್ಯನ್/ಭಾರತೀಯ" ಎಂದು ಪಟ್ಟಿ ಮಾಡಲಾಗಿದೆ ಎಂದು ವರದಿ ಹೇಳಿದೆ.

ಕೃಷ್ಣನ್ ಜಯರಾಮನ್ ಅವರು 8 ನಿಮಿಷಗಳ ಕಾಲ ತನ್ನ ಮೇಲೆ ನಡೆದ ವಾಗ್ದಾಳಿಯನ್ನು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. "ನಾಯಿ, ನೀವು  ಅಸಹ್ಯವಾಗಿ ಕಾಣುತ್ತೀರಿ. ಮತ್ತೆ ಈ ರೀತಿ ಸಾರ್ವಜನಿಕವಾಗಿ ಹೊರಬರಬೇಡಿ.  "ಕೊಳಕು ಹಿಂದೂ" ಎಂದು ತೇಜಿಂದರ್ ಕರೆದಿದ್ದಾನೆ. ಎರಡು ಬಾರಿ ಕೃಷ್ಣನ್ ಜಯರಾಮನ್ ಮೇಲೆ ಉಗುಳುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News