ಬಂಗ್ಲಗುಡ್ಡೆ | ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಸಮಾಗಮ
ಕಾರ್ಕಳ, ಸೆ.1: ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಬುಧವಾರ ಬಂಗ್ಲಗುಡ್ಡೆಯ ತ್ವೆಬ ಗಾರ್ಡನ್ ನಲ್ಲಿ ಜಿಲ್ಲಾ ದಅವಾ ಕಾರ್ಯದರ್ಶಿ ಶಾಹುಲ್ ಹಮೀದ್ ನಈಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸೈಯದ್ ಜವಾದ್ ತಂಙಳ್ ದುಆಗೈದರು. ಸೈಯದ್ ಫಝಲ್ ಜಿಫ್ರಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ ಇದರ ಡೈರಕ್ಟರ್ ಇಸ್ಮಾಯೀಲ್ ಮಂಚಿ ತರಬೇತಿ ನೀಡಿದರು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಬಂಗ್ಲಗುಡ್ಡೆ, ಮಾಧ್ಯಮ ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ, ಕ್ಯೂಡಿ ಕಾರ್ಯದರ್ಶಿ ನವಾಝ್ ಕಾರ್ಕಳ, ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಅಂಜದಿ ಕಂಪಾನ್ ಉಪಸ್ಥಿತರಿದ್ದರು.
ಕನ್ನಂಗಾರ್, ಮೂಳೂರ್, ಹಂಗಳೂರು, ಬಂಗ್ಲಗುಡ್ಡೆ ಸೇರಿದಂತೆ ನೂರಕ್ಕೂ ಮಿಕ್ಕ ದಅವಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ಪಬ್ಲಿಕೇಷನ್ ಕಾರ್ಯದರ್ಶಿ ಅನೀಸ್ ಫಾಳಿಲಿ ಸರ್ ಹಿಂದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.