ಗೊರ್ಬಚೇವ್ ಅಂತ್ಯಸಂಸ್ಕಾರದಲ್ಲಿ ಪುಟಿನ್ ಪಾಲ್ಗೊಳ್ಳುವುದಿಲ್ಲ: ಪೆಸ್ಕೋವ್

Update: 2022-09-01 18:04 GMT

ಮಾಸ್ಕೊ, ಸೆ.೧: ಸೋವಿಯತ್ ಒಕ್ಕೂಟದ ಅಂತಿಮ ಮುಖಂಡ ಮಿಖಾಯಿಲ್ ಗೊರ್ಬಚೇವ್ ಅವರ ಅಂತ್ಯಸಂಸ್ಕಾರದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಲ್ಗೊಳ್ಳುವುದಿಲ್ಲ ಎಂದು ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಗುರುವಾರ  ಹೇಳಿದ್ದಾರೆ.

ಅಂತ್ಯಸಂಸ್ಕಾರ ಸೆಪ್ಟಂಬರ್ ೩ರಂದು ನಡೆಯಲಿದೆ, ಆದರೆ ದುರದೃಷ್ಟವಶಾತ್ ಅಧ್ಯಕ್ಷರ ಕೆಲಸದ ವೇಳಾಪಟ್ಟಿಯು ಅವರನ್ನು ಹಾಜರಾಗಲು ಅನುಮತಿಸುವುದಿಲ್ಲ. ಗೊರ್ಬಚೇವ್ ಮೃತಪಟ್ಟ ಮಾಹಿತಿ ದೊರೆತೊಡನೆ ಪುಟಿನ್ ಆಸ್ಪತ್ರೆಗೆ ತೆರಳಿ ಅಗಲಿದ ಮುಖಂಡನಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ ಎಂದು ಪೆಸ್ಕೋವ್ ಹೇಳಿದ್ದಾರೆ. ೯೧ ವರ್ಷದ ಗೊರ್ಬಚೇವ್ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News