×
Ad

ಇಮ್ರಾನ್‌ಖಾನ್ ಜಾಮೀನು ಸೆ.೧೨ರವರೆಗೆ ವಿಸ್ತರಣೆ

Update: 2022-09-01 23:35 IST

ಇಸ್ಲಮಾಬಾದ್, ಸೆ.೧: ಭಯೋತ್ಪಾದನೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ಖಾನ್‌ಗೆ ಮಂಜೂರುಗೊಳಿಸಿದ್ದ ಮಧ್ಯಂತರ ಜಾಮೀನಿನ ಅವಧಿಯನ್ನು ಸೆಪ್ಟಂಬರ್ ೧೨ರವರೆಗೆ ವಿಸ್ತರಿಸಿ ಇಸ್ಲಮಾಬಾದ್‌ನ ನ್ಯಾಯಾಲಯ ಗುರುವಾರ ಆದೇಶ ಜಾರಿಗೊಳಿಸಿದೆ.

ಆಗಸ್ಟ್ ೨೦ರಂದು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನ್ಯಾಯಾಂಗದ ಸದಸ್ಯರ ವಿರುದ್ಧ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಪಿಟಿಐ ಪಕ್ಷದ ಅಧ್ಯಕ್ಷರೂ ಆಗಿರುವ ಇಮ್ರಾನ್ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜಾಮೀನು ಕೋರಿ ಇಮ್ರಾನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಸೆಪ್ಟಂಬರ್ ೧ರವರೆಗೆ ಜಾಮೀನು ಮಂಜೂರುಗೊಳಿಸಿ, ಸೆಪ್ಟಂಬರ್ ೧ರಂದು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು.

ಜಾಮೀನು ವಿಸ್ತರಣೆಗೆ ಗುರುವಾರ ಇಮ್ರಾನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಜಾಮೀನು ಅವಧಿಯನ್ನು ಸೆಪ್ಟಂಬರ್ ೧೨ರವರೆಗೆ ವಿಸ್ತರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News