ಮ್ಯಾನ್ಮಾರ್: ಬ್ರಿಟನ್ ನ ಮಾಜಿ ರಾಯಭಾರಿಗೆ ಜೈಲುಶಿಕ್ಷೆ

Update: 2022-09-02 16:27 GMT

ಯಾಂಗಾನ್, ಸೆ.೨: ಮ್ಯಾನ್ಮಾರ್ನಲ್ಲಿ ಈ ಹಿಂದೆ ಬ್ರಿಟನ್ನ ರಾಯಭಾರಿಯಾಗಿದ್ದ ವಿಕಿ ಬೊಮ್ಯಾನ್ ಮತ್ತವರ ಪತಿ, ಮ್ಯಾನ್ಮಾರ್ನ ಪ್ರಸಿದ್ಧ ಕಲಾವಿದ ಹೆಟಿನ್ ಲಿನ್ಗೆ ಮ್ಯಾನ್ಮಾರ್ನ ಸೇನಾಡಳಿತ ಜೈಲುಶಿಕ್ಷೆ ಘೋಷಿಸಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

೨೦೦೨ರಿಂದ ೨೦೦೫ರವರೆಗೆ ಮ್ಯಾನ್ಮಾರ್ನಲ್ಲಿ ಬ್ರಿಟನ್ ರಾಯಭಾರಿಯಾಗಿದ್ದ ವಿಕಿ, ವಿದೇಶೀಯರ ನೋಂದಣಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಕ್ಕಿಂತ ಭಿನ್ನವಾದ ವಿಳಾಸದಲ್ಲಿ ವಾಸಿಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡದ ಆರೋಪದಲ್ಲಿ ಕಳೆದ ತಿಂಗಳು ಬಂಧಿಸಲ್ಪಟ್ಟಿದ್ದರು. ವಿಕಿಗೆ ವಿಭಿನ್ನ ವಿಳಾಸದ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ ಆರೋಪದಲ್ಲಿ ಆಕೆಯ ಪತಿ ಹೆಟಿನ್ ಲಿನ್ರನ್ನು ಬಂಧಿಸಲಾಗಿತ್ತು. ದಂಪತಿಗೆ ೫ ವರ್ಷದವರೆಗೆ ಜೈಲುಶಿಕ್ಷೆ ಆಗಬಹುದು ಎಂದು ಮೂಲಗಳು ಹೇಳಿವೆ. ಈ ಹಿಂದೆ ಮ್ಯಾನ್ಮಾರ್ನಲ್ಲಿ ಸೇನಾಡಳಿತವಿದ್ದಾಗ, ಸೇನಾಡಳಿತವನ್ನು ವಿರೋಧಿಸಿದ ಆರೋಪದಲ್ಲಿ ೧೯೯೮ರಲ್ಲಿ ಹೆಟಿನ್ರನ್ನು ಬಂಧಿಸಲಾಗಿತ್ತು. ರಾಯಭಾರಿ ಕಾರ್ಯಾವಧಿ ಅಂತ್ಯಗೊAಡ ಬಳಿಕ ವಿಕಿ `ಮ್ಯಾನ್ಮಾರ್ ಸೆಂಟರ್ ಫಾರ್ ರೆಸ್ಪಾನ್ಸಿಬಲ್ ಬಿಸಿನೆಸ್' ಕೇಂದ್ರದ ನಿರ್ದೇಶಕಾರಿ ಕಾರ್ಯ ನಿರ್ವಹಿಸುತ್ತಿದ್ದರು.

ಮ್ಯಾನ್ಮಾರ್ನಲ್ಲಿ ಕಳೆದ ವರ್ಷ ನಡೆದ ಸೇನಾಕ್ಷಿಪ್ರಕ್ರಾಂತಿಯನ್ನು ಖಂಡಿಸಿದ್ದ ಬ್ರಿಟನ್, ಆ ದೇಶದ ಸೇನೆಯೊಂದಿಗೆ ಸಂಪರ್ಕದಲ್ಲಿರುವ ಹಲವು ವ್ಯಕ್ತಿಗಳು ಹಾಗೂ ಸಂಘಟನೆಗಳ ಮೇಲೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಸಂಬAಧ ಹದಗೆಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News