×
Ad

ಇಸ್ರೇಲ್ ವಾಯುದಾಳಿ: ಸಿರಿಯಾ ವಿಮಾನ ನಿಲ್ದಾಣದ ರನ್ ವೇಗೆ ಹಾನಿ

Update: 2022-09-02 22:19 IST

ದಮಾಸ್ಕಸ್, ಸೆ.೨: ಸಿರಿಯಾದ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಶುಕ್ರವಾರ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ವಿಮಾನ ನಿಲ್ದಾಣದ ರನ್ವೇಯಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಅಲ್ಲದೆ ಬಳಿಯ ಕಟ್ಟಡವೊಂದಕ್ಕೂ ಹಾನಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಸಿರಿಯಾದ ಅಲೆಪ್ಪೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಮಿಲಿಟರಿ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆದಿರುವ ಸಾಧ್ಯತೆಯಿದೆ. ದಾಳಿಯಲ್ಲಿ ಮಿಲಿಟರಿ ಕೇಂದ್ರದ ಕಟ್ಟಡಕ್ಕೂ ಹಾನಿಯಾಗಿದೆ. ರನ್ವೇಗೆ ತೀವ್ರ ಹಾನಿಯಾಗಿದೆ  ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News