×
Ad

ಮುಂದಿನ ತಿಂಗಳಿನಿಂದ ಈ ಮೊಬೈಲ್‍ಗಳಲ್ಲಿ ವಾಟ್ಸ್ಆ್ಯಪ್‌ ಸಿಗಲ್ಲ

Update: 2022-09-03 07:50 IST

ಹೊಸದಿಲ್ಲಿ: ಮುಂದಿನ ತಿಂಗಳಿನಿಂದ ವಾಟ್ಸ್ಆ್ಯಪ್‌ ಕೆಲ ಮೊಬೈಲ್ ಸಾಧನಗಳಲ್ಲಿ ಕಾರ್ಯನಿರ್ವಹಿಸದಿರುವ ಸಾಧ್ಯತೆ ಇದೆ. ಡಬ್ಲ್ಯುಎಬೆಟಾ ಇನ್ಫೋ (WABetaInfo) ಮಾಹಿತಿಯ ಪ್ರಕಾರ, ಆಪರೇಟಿಂಗ್ ಸಿಸ್ಟಂ 10 ಮತ್ತು 11ರಡಿ ಕಾರ್ಯ ನಿರ್ವಹಿಸುವ ಐ ಫೋನ್‍ಗಳಲ್ಲಿ ವಾಟ್ಸ್ಆ್ಯಪ್‌ಗೆ ಚಾಲನೆ ನೀಡಬೇಕಿದ್ದರೆ ಅಪ್‍ಡೇಟ್ ಮಾಡುವುದು ಅಗತ್ಯ.

ಈ ಮೆಸೇಜಿಂಗ್ ಪ್ಲಾಟ್‍ಫಾರಂ (platform) ನಲ್ಲಿ ಜಾರಿಗೆ ತರಲಾದ ಹೊಸ ವಿಶೇಷತೆಗಳನ್ನು ಜಾರಿಗೊಳಿಸುವ ದೃಷ್ಟಿಯಿಂದ ವಾಟ್ಸ್ಆ್ಯಪ್‌ ಕೆಲ ಐಓಎಸ್ ಅವತರಣಿಕೆಗಳಿಗೆ ಬೆಂಬಲವನ್ನು ಕಿತ್ತುಹಾಕಲಿದೆ. ಈ ಅಪ್‍ಡೇಟ್‍ಗಳು ತೀರಾ ಇತ್ತೀಚಿನ ಭದ್ರತಾ ಅಪ್‍ಡೇಟ್‍ಗಳನ್ನೂ ಒಳಗೊಂಡಿರುತ್ತವೆ ಎಂದು ವರದಿ ವಿವರಿಸಿದೆ.

ಐಓಎಸ್ 10 ಅಥವಾ ಐಓಎಸ್ 11 ಅವತರಣಿಕೆಗಳನ್ನು ಬಳಸುವ ಐ-ಫೋನ್ ಬಳಕೆದಾರರಿಗೆ ಈಗಾಗಲೇ ಈ ಸಂಬಂಧ ಎಚ್ಚರಿಕೆ ಸಂದೇಶಗಳನ್ನು ವಾಟ್ಸ್ಆ್ಯಪ್‌ ಕಳುಹಿಸಿದ್ದು, 2022ರ ಅಕ್ಟೋಬರ್ 24ರ ಬಳಿಕ  ವಾಟ್ಸ್ಆ್ಯಪ್‌ ಐಓಎಸ್ 10 ಮತ್ತು ಐಓಎಸ್ 11 ಗಳನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಪರಿಷ್ಕರಣೆಯಿಂದಾಗಿ ಐಓಎಸ್ 12ಕ್ಕಿಂತ ಕೆಳಗಿನ ಐಫೋನ್‍ಗಳಲ್ಲಿ ವಾಟ್ಸ್ಆ್ಯಪ್‌ ದೊರೆಯುವುದಿಲ್ಲ. ವಾಟ್ಸ್ಆ್ಯಪ್‌ ಸೇವೆ ಪಡೆಯುವುದನ್ನು ಮುಂದುವರಿಸಬೇಕಾದರೆ ಐಓಎಸ್ 12 ಅಥವಾ ಹೊಸ ಅವತರಣಿಕೆಯ ಸಾಫ್ಟ್ ವೇರ್ ಅಗತ್ಯ ಎಂದು ವಾಟ್ಸ್ಆ್ಯಪ್‌ ಈ ಮೊದಲು ಅಧಿಸೂಚನೆ ನೀಡಿತ್ತು. ಪ್ರಸ್ತುತ ಕೇವಲ ಐಫೋನ್ 5 ಮತ್ತು ಐಫೋನ್ 5ಸಿ ಮಾಡೆಲ್‍ಗಳು ಈ ಬದಲಾವಣೆಯಿಂದ ಬಾಧಿತವಾಗುತ್ತವೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News