ಏಷ್ಯಾ ಕಪ್‌ ಟಿ-20; ಸೂಪರ್ 4 ಹಂತಕ್ಕೆ ಪಾಕಿಸ್ತಾನ ತಂಡ ಲಗ್ಗೆ

Update: 2022-09-03 02:57 GMT

ದುಬೈ: ಮೊದಲು ಬ್ಯಾಟ್ ಮಾಡಿ 20 ಓವರ್ ಗಳಲ್ಲಿ 194 ರನ್‍ಗಳ ಬೃಹತ್ ಗುರಿ ನೀಡಿದ ಪಾಕಿಸ್ತಾನ ತಂಡ ಎದುರಾಳಿ ಹಾಂಕಾಂಗ್ ತಂಡವನ್ನು ಕೇವಲ 35 ರನ್‍ಗಳಿಗೆ ಆಲೌಟ್ ಮಾಡುವ ಮೂಲಕ ಭರ್ಜರಿ ವಿಜಯದೊಂದಿಗೆ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ.

ನಿಝಾಕತ್ ಖಾನ್ ಮತ್ತು ಬಾಬರ್ ಹಯಾತ್ ಅವರ ವಿಕೆಟ್ ಕಬಳಿಸುವ ಮೂಲಕ ನಸೀಮ್ ಶಾ ಎದುರಾಳಿ ತಂಡದ ಕುಸಿತಕ್ಕೆ ನಾಂದಿ ಹಾಡಿದರು. ಬಳಿಕ ಯಾಸೀನ್ ಮುರ್ತಾಝ ಅವರ ವಿಕೆಟ್ ಪಡೆದ ಶಾನವಾಝ್ ದಹನಿ ಮೂರನೇ ವಿಕೆಟ್ ಕಿತ್ತರು. ಬಳಿಕ ಏಳು ವಿಕೆಟ್‍ಗಳನ್ನು ಶಾದಬ್ ಖಾನ್ ಹಾಗೂ ಮೊಹ್ಮದ್ ನವಾಝ್ ಕಬಳಿಸುವ ಮೂಲಕ ಎದುರಾಳಿಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಮೂರನೇ ಓವರ್‌ ನಲ್ಲೇ ನಾಯಕನ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿದ ಪಾಕಿಸ್ತಾನ ತಂಡಕ್ಕೆ ಮೊಹ್ಮದ್ ರಿಝ್ವಾನ್ ಹಾಗೂ ಫಖರ್ ಝಮಾನ್ ಅವರ 116 ರನ್‍ಗಳ ಜತೆಯಾಟ ವರದಾನವಾಯಿತು. ಝಮಾನ್ 58 ರನ್ ಗಳಿಸಿ ಔಟ್ ಆದರೆ, ರಿಝ್ವಾನ್ ಅಜೇಯ 78 ರನ್ ಸಿಡಿಸಿದರು. ಖುಷ್‍ದಿನ್ ಶಾ ಕೇವಲ 15 ಎಸೆತಗಳಲ್ಲಿ 35 ರನ್ ಗಳಿಸಿ 190ರ ಗಡಿ ದಾಟಿಸಿದರು.

ಇದಕ್ಕೆ ಉತ್ತರವಾಗಿ ಹಾಂಕಾಂಗ್ ತಂಡ ಕೇವಲ 10.4 ಓವರ್‌ ಗಳಲ್ಲಿ 38 ರನ್‍ಗಳಿಗೆ ಆಲೌಟ್ ಆಗಿ 155 ರನ್‍ಗಳ ಅಂತರದ ಸೋಲು ಅನುಭವಿಸಿದೆ ಎಂದು sports.ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News