ಮಣಿಪುರ: ಜೆಡಿಯುನ ಐವರು ಶಾಸಕರು ಬಿಜೆಪಿಗೆ ಸೇರ್ಪಡೆ
ಗುವಾಹಟಿ: ಮಣಿಪುರದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar')ಅವರ ಜನತಾ ದಳ (ಸಂಯುಕ್ತ)(Janata Dal (United)ಪಕ್ಷದ ಆರು ಶಾಸಕರ ಪೈಕಿ ಐವರು ಶುಕ್ರವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ಹೇಳಿಕೆಯೊಂದು ತಿಳಿಸಿದೆ.
ಬಿಜೆಪಿಯೊಂದಿಗೆ ಐವರು ಜೆಡಿಯು ಶಾಸಕರ ವಿಲೀನವನ್ನು ಅಂಗೀಕರಿಸಲು ಸ್ಪೀಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಪಕ್ಷವನ್ನು ಬದಲಾಯಿಸಿದ ಶಾಸಕರ ಸಂಖ್ಯೆಯು ಒಟ್ಟು ಸದಸ್ಯಬಲದ ಮೂರನೇ ಎರಡಕ್ಕಿಂತ ಹೆಚ್ಚಿರುವುದರಿಂದ ಅವರ ಪಕ್ಷಾಂತರವನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ಮಣಿಪುರ ವಿಧಾನಸಭೆ ಕಾರ್ಯದರ್ಶಿ ಕೆ.ಮೇಘಜಿತ್ ಸಿಂಗ್ ಸಹಿ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ
ಈಶಾನ್ಯ ರಾಜ್ಯದಲ್ಲಿ ನಿತೀಶ್ ಕುಮಾರ್ ಪಕ್ಷದ ಶಾಸಕರನ್ನು ಬಿಜೆಪಿ ಗುರಿಯಾಗಿಸಿದ್ದು ಇದು ಎರಡನೇ ಬಾರಿ. 2020 ರಲ್ಲಿ ಅರುಣಾಚಲ ಪ್ರದೇಶದಲ್ಲಿ ಏಳು ಜೆಡಿಯು ಶಾಸಕರ ಪೈಕಿ ಆರು ಮಂದಿ ಬಿಜೆಪಿ ಸೇರಿದ್ದರು ಹಾಗೂ ಕಳೆದ ವಾರ ಏಕೈಕ ಶಾಸಕನೂ ಸಹ ಬಿಜೆಪಿಯಲ್ಲಿ ವಿಲೀನಗೊಂಡರು.
ಈ ವರ್ಷ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಿದ್ದ 38 ಕ್ಷೇತ್ರಗಳ ಪೈಕಿ ಆರರಲ್ಲಿ ಗೆದ್ದಿತ್ತು. ಬಿಜೆಪಿಗೆ ಸೇರ್ಪಡೆಯಾದ ಶಾಸಕರೆಂದರೆ ಕೆ ಜಾಯ್ಕಿಶನ್, ಎನ್. ಸನತೆ, ಎಂಡಿ ಅಚಾಬ್ ಉದ್ದೀನ್, ಮಾಜಿ ಡಿಜಿಪಿ ಎಲ್ .ಎಂ. ಖೌಟೆ ಹಾಗೂ ತಂಗಜಮ್ ಅರುಣ್ ಕುಮಾರ್.