ಜಿಲ್ಲಾಧಿಕಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಛೀಮಾರಿ: ತೀವ್ರ ಆಘಾತ ವ್ಯಕ್ತಪಡಿಸಿದ ಕೆ.ರಾಮರಾವ್

Update: 2022-09-03 06:20 GMT
Photo:PTI

ಹೈದರಾಬಾದ್: ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡುವ ಅಕ್ಕಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪಾಲು ಎಷ್ಟು ಎಂಬುದಕ್ಕೆ ಉತ್ತರ ನೀಡಲು ಸಾಧ್ಯವಾಗದ ಜಿಲ್ಲಾಧಿಕಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman )ಛೀಮಾರಿ ಹಾಕಿದ್ದಕ್ಕೆ ತೆಲಂಗಾಣ ಸಚಿವ ಕೆ.ಟಿ.ರಾಮರಾವ್ (Telangana Minister KT Rama Rao)ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಕೆಟಿಆರ್ ಎಂದು ಜನಪ್ರಿಯವಾಗಿರುವ ರಾಮರಾವ್, ಉನ್ನತ ಹುದ್ದೆಗಳನ್ನು ಹೊಂದಿರುವ ಜನರ ಇಂತಹ ನಡವಳಿಕೆಯು "ಕಠಿಣ ಪರಿಶ್ರಮಿ ಎಐಎಸ್ ಅಧಿಕಾರಿಗಳನ್ನು ತೀವ್ರ ನಿರಾಶೆಗೊಳಿಸುತ್ತದೆ" ಎಂದು ಹೇಳಿದರು.

ರಾಮರಾವ್ ಅವರು ಶುಕ್ರವಾರ ರಾತ್ರಿ ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ, "ಇಂದು ಕಾಮರೆಡ್ಡಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ / ಕಲೆಕ್ಟರ್ ಅವರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ  ಅಶಿಸ್ತಿನ ವರ್ತನೆಯಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ಬೀದಿಯಲ್ಲಿರುವ ಈ ರಾಜಕೀಯ ಇತಿಹಾಸಕಾರರು ಶ್ರಮವಹಿಸುವ AIS ಅಧಿಕಾರಿಗಳನ್ನು ಮಾತ್ರ ನಿರುತ್ಸಾಹಗೊಳಿಸುತ್ತಾರೆ" ಎಂದು ಅವರು ಹೇಳಿದರು.

"ಕಲೆಕ್ಟರ್ಕೆ ಎಂಆರ್ ಜಿತೇಶ್ ವಿ. ಪಾಟೀಲ್, ಐಎಎಸ್ ಅವರ ಘನತೆಯ ನಡವಳಿಕೆಗೆ ನನ್ನ ಅಭಿನಂದನೆಗಳು" ಎಂದು ಕೆಟಿಆರ್  ಟ್ವೀಟ್ ಮಾಡಿದ್ದಾರೆ.

ಬೀರ್ಕೂರಿನ ಪಿಡಿಎಸ್ ಪಡಿತರ ಅಂಗಡಿಯೊಂದರ ಪರಿಶೀಲನೆ ವೇಳೆ ಕೇಂದ್ರ ಸಚಿವೆ ಸೀತಾರಾಮನ್ ಅವರು ಜಿತೇಶ್ ಪಾಟೀಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಏಕೆ ಕಾಣೆಯಾಗಿದೆ ಎಂದು ಕೇಳಿದ್ದರು.

ಸೀತಾರಾಮನ್ ಅವರು ಬಿಜೆಪಿಯ 'ಲೋಕಸಭಾ ಪ್ರವಾಸ ಯೋಜನೆ'ಯ ಭಾಗವಾಗಿ ಝಹೀರಾಬಾದ್ ಸಂಸದೀಯ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News