×
Ad

ಐಪಿಎಲ್: ಸನ್‌ರೈಸರ್ಸ್ ಹೈದರಾಬಾದ್‌ನ ಮುಖ್ಯ ಕೋಚ್ ಆಗಿ ಬ್ರಿಯಾನ್ ಲಾರಾ ನೇಮಕ

Update: 2022-09-03 12:15 IST
Photo:PTI

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬರುವ ಋತುಗಳಿಗೆ ತನ್ನ ಹೊಸ ಮುಖ್ಯ ಕೋಚ್ ( Head Coach) ಆಗಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ(Brian Lara) ಅವರನ್ನು ನೇಮಕ ಮಾಡಿರುವುದನ್ನು ಸನ್ ರೈಸರ್ಸ್ ಹೈದರಾಬಾದ್ (SunRisers Hyderabad) ಶನಿವಾರ ಖಚಿತಪಡಿಸಿದೆ.

ಕಳೆದ ಆವೃತ್ತಿಯ ಪಂದ್ಯಾವಳಿಯಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ಟಾಮ್ ಮೂಡಿ ಅವರಿಂದ ಫ್ರಾಂಚೈಸಿ ಬೇರ್ಪಟ್ಟಿದೆ. ಕಳೆದ ಬಾರಿ ಸನ್ ರೈಸರ್ಸ್ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದಿತ್ತು.

ಲಾರಾ ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಕಾರ್ಯತಂತ್ರದ ಸಲಹೆಗಾರ ಹಾಗೂ ಬ್ಯಾಟಿಂಗ್ ತರಬೇತುದಾರರಾಗಿದ್ದರು.

"ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಮುಂಬರುವ ಐಪಿಎಲ್ ಸೀಸನ್‌ಗಳಿಗೆ ನಮ್ಮ ಮುಖ್ಯ ಕೋಚ್ ಆಗಿರುತ್ತಾರೆ" ಎಂದು ಸನ್‌ರೈಸರ್ಸ್ ಹೈದರಾಬಾದ್‌ನ ಅಧಿಕೃತ ಹ್ಯಾಂಡಲ್ ಶನಿವಾರ ಟ್ವೀಟ್ ಮಾಡಿದೆ.

2013 ಹಾಗೂ 2019 ರ ನಡುವೆ ಸನ್‌ರೈಸರ್ಸ್‌ನೊಂದಿಗೆ ಮೂಡಿ ಯಶಸ್ವಿ ನಿರ್ವಹಣೆ ತೋರಿದ್ದರು. ಆಗ  ತಂಡವು ಐದು ಬಾರಿ ಪ್ಲೇ-ಆಫ್‌ ಸುತ್ತುಗಳನ್ನು ತಲುಪಿತ್ತು. 2016 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಆರು ಗೆಲುವು ಹಾಗೂ  ಎಂಟು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News