ದ.ಕ., ಉಡುಪಿ, ಕೊಡಗು ಜಿಲ್ಲಾ ಗ್ರಂಥಪಾಲಕರ ಸಂಘಕ್ಕೆ ಆಯ್ಕೆ
Update: 2022-09-03 22:41 IST
ಮಂಗಳೂರು, ಸೆ.3: ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲಾ ಗ್ರಂಥಾಪಾಲಕರ ಸಂಘದ ಅಧ್ಯಕ್ಷರಾಗಿ ಮಂಗಳೂರಿನ ಬೆಸೆಂಟ್ ಸಂಧ್ಯಾ ಕಾಲೇಜಿನ ಗ್ರಂಥಾಪಾಲಕ ಡಾ.ವಾಸಪ್ಪ ಗೌಡ, ಕಾರ್ಯದರ್ಶಿಯಾಗಿ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮ ಕೆ. ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಡಾ. ರೇಖಾ ಎಸ್. ಪೈ, ಜತೆ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಕೋಶಾಧಿಕಾರಿಯಾಗಿ ಕವಿತಾ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಡಾ.ವನನಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ರವಿಚಂದ್ರ ನಾಯ್ಕ, ಡಾ. ರಘುರಾಮ ಕುಕ್ಕುಡೆ, ಹರೀಶ್, ಕೃಷ್ಣ ಶಾಸ್ತಾನ, ಯಶೋಧಾ, ರೇಖಾ, ಜ್ಯೋತಿ ಅವರನ್ನು ಆಯ್ಕೆಮಾಡಲಾಯಿತು.