×
Ad

ಟಿ20 ಕ್ರಿಕೆಟ್ ಗೆ ಮುಶ್ಫಿಕುರ್ರಹೀಂ ವಿದಾಯ

Update: 2022-09-04 15:39 IST
ಮುಶ್ಫಿಕುರ್ರಹೀಂ (PTI)

ಢಾಕಾ: ಏಷ್ಯಾ ಕಪ್‌(Asia Cup)ನಲ್ಲಿ ಬಾಂಗ್ಲಾದೇಶ(Bangladesh)ದ ಸತತ ಸೋಲಿನ ಬಳಿಕ, ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕುರ್ರಹೀಂ(Mushfiqur Rahim) ಟೆಸ್ಟ್ ಮತ್ತು ಏಕದಿನ ಪಂದ್ಯಗಳ ಮೇಲೆ ಕೇಂದ್ರೀಕರಿಸಲು ಟಿ 20 ಗಳಿಂದ ನಿವೃತ್ತಿ ಘೋಷಿಸಿದ್ದಾರೆ.

"ನಾನು T20 ಇಂಟರ್ನ್ಯಾಷನಲ್‌ಗಳಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ ಮತ್ತು ಟೆಸ್ಟ್ ಮತ್ತು ಏಕದಿನದ ಆಟಗಳ ಮೇಲೆ ಕೇಂದ್ರೀಕರಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ

ಬ್ಯಾಟಿಂಗ್ ವಿಭಾಗದಲ್ಲಿ ಅವರ ಕಳಪೆ ಪ್ರದರ್ಶನ ಮುಂದುವೆರೆದಿದೆ. ಏಷ್ಯಾಕಪ್‌ನಲ್ಲಿ ಅವರು ಎರಡು ಪಂದ್ಯಗಳಲ್ಲಿ ಕೇವಲ ಐದು ರನ್ ಗಳಿಸಲಷ್ಟೇ ಸಾಧ್ಯವಾಗಿದೆ.

ಬಾಂಗ್ಲಾದೇಶ ಏಷ್ಯಾಕಪ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿತ್ತು. ಮೊದಲ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಸೋಲನುಭವಿಸಿದರೆ, ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ವಿಕೆಟ್‌ಗಳಿಂದ ಸೋತಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News