×
Ad

ಭಟ್ಕಳ; ದಾವತ್ ಸೆಂಟರ್ ನಲ್ಲಿ ನಾಗರೀಕ ಸೇವಾ ಕೇಂದ್ರ ಉದ್ಘಾಟನೆ

Update: 2022-09-04 22:05 IST

ಭಟ್ಕಳ: ನಗರದ ಸುಲ್ತಾನ್ ಸ್ಟ್ರೀಟ್‍ನಲ್ಲಿರುವ ದಾವತ್ ಸೆಂಟರ್ ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ವತಿಯಿಂದ  ನಾಗರೀಕ ಸೇವಾ ಕೇಂದ್ರವನ್ನು ಜ.ಇ.ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಲ್ಗಾಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕವು ನಾಗರೀಕರಿಗಾಗಿ ಉಚಿತ ಸೇವೆಯನ್ನು ನೀಡುತ್ತ ಬಂದಿದೆ. ರಾಜ್ಯಾದ್ಯಂತ ಹಲವು ನಾಗರೀಕ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಭಟ್ಕಳದಲ್ಲಿ ಇಂದು ಉದ್ಘಾಟನೆಗೊಂಡಿದೆ. ಇದರಿಂದಾಗಿ ಭಟ್ಕಳದ ಎಲ್ಲ ಸಮುದಾಯದ ಜನರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನಿಯರ್ ನಝೀರ್ ಆಹ್ಮದ್ ಖಾಝಿ, ನಾಗರೀಕರು ತಮ್ಮ ಮತದಾರರು ತಮ್ಮ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‍ನೊಂದಿಗೆ ಲಿಂಕ್ ಮಾಡಿಸಬಹುದಾಗಿದ್ದು ನಾಗರೀಕ ಸೇವಾ ಕೇಂದ್ರದಿಂದ ಲಾಭವನ್ನು ಪಡೆದುಕೊಳ್ಳಬೇಕು, ಅಲ್ಲದೆ ವಿದ್ಯಾರ್ಥಿ ವೇತನ ಆನ್‍ಲೈನ್ ಸೇವೆ, ಪಾಸ್ ಪೋರ್ಟ್,‌ ಟ್ರೇಡ್ ಲೈಸನ್ಸ್, ಡ್ರೈವಿಂಗ್ ಲೈಸನ್ಸ್, ಪಡಿತರ ಚೀಟಿ ಮುಂತಾದ ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಉಪಾಧ್ಯಕ್ಷ ಮುಹಮ್ಮದ್ ಯೂಸೂಫ್ ಕನ್ನಿ, ಕಾರ್ಯದರ್ಶಿ ಮೌಲಾನ ವಹಿದ್ದುದ್ದೀನ್ ಖಾನ್ ಉಮರಿ, ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸಲೀಮ್ ಉಮರಿ, ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ಸೈಯದ್ಯ ಶಕೀಲ್ ಎಸ್.ಎಂ, ಕಾದೀರ್ ಮಿರಾ ಪಟೇಲ್, ಎಸ್.ಎಂ.ಸೈಯದ್ಯ ಝುಬೈರ್, ಮುಜಾಹಿದ್ ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News