ಕೆನಡಾದಲ್ಲಿ ಸರಣಿ ಇರಿತ: 10 ಮಂದಿ ಮೃತ್ಯು

Update: 2022-09-05 02:23 GMT
(ಫೋಟೊ : Michael Bell/The Canadian Press via AP)

ರೆಜಿನಾ (ಕೆನಡಾ): ಕೆನಡಾದ ಮೂಲನಿವಾಸಿಗಳ ಪ್ರದೇಶದಲ್ಲಿ ಮತ್ತು ಸಸ್ಕತ್‍ಚೆವನ್ ಪ್ರಾಂತ್ಯದ ಇನ್ನೊಂದು ಪಟ್ಟಣದಲ್ಲಿ ನಡೆದ ಸರಣಿ ಇರಿತ ಪ್ರಕರಣಗಳಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಇತರ 15 ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಇಬ್ಬರು ಸರಣಿ ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಜೇಮ್ಸ್ ಸ್ಮಿತ್ ಕ್ರೀ ನೇಷನ್ ಮತ್ತು ಈಶಾನ್ಯ ಸಸ್ಕತೂನ್ ಪ್ರದೇಶದ ವೆಲ್ಡನ್ ಗ್ರಾಮದಲ್ಲಿ ಸರಣಿ ಇರಿತ ಪ್ರಕರಣಗಳು ನಡೆದಿವೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಪೈಕಿ ಕೆಲವರನ್ನು ಗುರಿ ಮಾಡಿ ಹಂತಕರು ಇರಿದಿದ್ದರೆ, ಮತ್ತೆ ಕೆಲವರ ಮೇಲೆ ಬೇಕಾಬಿಟ್ಟಿ ದಾಳಿ ನಡೆಸಲಾಗಿದೆ ಎಂದು ಸಸ್ಕತ್‍ಚೆವನ್ ಆರ್‍ಸಿಎಂಪಿ ಸಹಾಯಕ ಆಯುಕ್ತ ರೋಂಡಾ ಬ್ಲ್ಯಾಕ್‍ಮೋರ್ ಹೇಳಿದ್ದಾರೆ. ದಾಳಿಯ ಉದ್ದೇಶ ತಿಳಿದು ಬಂದಿಲ್ಲ.

ಈ ಪ್ರಾಂತ್ಯದಲ್ಲಿ ನಡೆದಿರುವ ಕೃತ್ಯ ಭಯಾನಕ ಎಂದು ಅವರು ಬಣ್ಣಿಸಿದ್ದಾರೆ. ಒಟ್ಟು 13 ಕಡೆಗಳಲ್ಲಿ ಇಂಥ ದಾಳಿಗಳು ನಡೆದಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಂತಕರು ತಾವೇ ಶರಣಾಗುವಂತೆ ಅವರು ಮನವಿ ಮಾಡಿದ್ದಾರೆ.

ಫಸ್ಟ್ ನೇಷನ್ ಕಮ್ಯುನಿಟಿ ಪ್ರದೇಶದಿಂದ ಮುಂಜಾನೆ 6 ಗಂಟೆಯ ಮುನ್ನವೇ ಇಂಥ ಇರಿತದ ಪ್ರಕರಣಗಳು ವರದಿಯಾಗುತ್ತಿವೆ. ನಂತರ ಮಧ್ಯಾಹ್ನದ ವೇಳೆಗೆ ಇಂಥ ಹಲವು ಪ್ರಕರಣಗಳು ವರದಿಯಾದವು. ಇಬ್ಬರು ಶಂಕಿತ ದಾಳಿಕೋರರನ್ನು ರೆಜಿನಾದಲ್ಲಿ ಪತ್ತೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News